Connect with us

Hi, what are you looking for?

Diksoochi News

ಕರಾವಳಿ

ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನ ಕಾಳಿಬೆಟ್ಟ: ಶ್ರೀ ಅಶ್ವತ್ಥ ಉಪನಯನ, ವಿವಾಹ ಮಹೋತ್ಸವ ಸಂಪನ್ನ

2

ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಸಂಜೆಯಿಂದ ಪ್ರಾರಂಭವಾಗಿ ಏಪ್ರಿಲ್ 5 ರಿಂದ ಏಪ್ರಿಲ್ 7ರ ವರೆಗೆ ಶ್ರೀ ಕ್ಷೇತ್ರದ ವೈದಿಕ(ಗೋಕರ್ಣ) ವಿಭಾಗದವರ ನೇತೃತ್ವದಲ್ಲಿ ಶ್ರೀ ಅಶ್ವತ್ಥ ಉಪನಯನ – ವಿವಾಹ ಮಹೋತ್ಸವ ವು ವೈದಿಕ
ವಿಧಿ ವಿಧಾನಗಳೊಂದಿಗೆ ಜರಗಿತು ಹಾಗೂ ಅನ್ನಸಂತರ್ಪಣೆ ಕೂಡ ಜರಗಿತು.

ಏಪ್ರಿಲ್ 5 ರಂದು ಸಂಜೆ ಗಣೇಶ ಪೂಜೆಯೊಂದಿಗೆ ಪ್ರಾರಂಭಗೊಂಡು, ವಾಸ್ತು ಹೋಮಾದಿಗಳು ನೆರವೇರಿತು. ಏಪ್ರಿಲ್ 6 ರಂದು ಳ ಗಣೇಶ ಪೂಜೆ, ಗಣಹವನ, ಪಂಚಕುಂಡಿ ಹೋಮಾದಿಗಳೊಂದಿಗೆ ಶ್ರೀ ಅಶ್ವತ್ಥ ಮರದ ಉಪನಯನ, ರಾತ್ರಿ ಸೂಕ್ತ ಪಾರಾಯಣ, ಅಷ್ಟಾವದಾನ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು.


ಏಪ್ರಿಲ್ 7 ರಂದು ಗಣೇಶ ಪೂಜೆಯೊಂದಿಗೆ ಮೊದಲ್ಗೊಂಡು, ಹೋಮ-ಹವನಾದಿಗಳು, ಪಾರಾಯಣ, ಶ್ರೀ ಅಶ್ವತ್ಥ ಮರ-ನೆಲ್ಲಿ ವಿವಾಹ ಮಹೋತ್ಸವ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ಈ ಪುಣ್ಯ ಕಾರ್ಯದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು, ಶ್ರೀ ಕ್ಷೇತ್ರದ ಅರ್ಚಕ ವೃಂದ, ಸಿಬ್ಬಂದಿ ವರ್ಗ, ಊರ ಹಾಗೂ ಪರವೂರ ಭಕ್ತಾದಿಗಳು ಪಾಲ್ಗೊಂಡರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!