ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಳೆದ 2 ವರ್ಷದಿಂದ ಕಳೆಗುಂದಿದ ರಥೋತ್ಸವಗಳಿಗೆ ಹೊಸ ಸಂವತ್ಸರದ ಪ್ರಥಮ ರಥೋತ್ಸವ ಸೀಮೆಯ ಅಧಿದೇವರಾದ ಬಾರಕೂರು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 2 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಗರೋತ್ಸವ ವಸಂತ ಪೂಜೆ , ಕಲ್ಲು ಚಪ್ಪರದಲ್ಲಿ ಕಟ್ಟೆ ಪೂಜೆಯೊಂದಿಗೆ ಶುಕ್ರವಾರ ಬ್ರಹ್ಮ ರಥೋತ್ಸವ ಜರುಗಿತು.

ಈ ಬಾರಿ ರಥೋತ್ಸವಕ್ಕೆ ಸಹಸ್ರಾರು ಮಂದಿ ಭಾಗವಹಿಸಿದರು.
ಬಾರಕೂರಿನ ಅಮರ ಗಾಯಕ ಪಿ .ಕಾಳಿಂಗ ರಾವ್ ನೆನಪಿನ ಬಾವಬೆಳದಿಂಗಳು ಜನಪದ ವೈಭವ ಕಾರ್ಯಕ್ರಮ ಡಾ. ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ರಥ ಬೀದಿಯಲ್ಲಿ ಜರುಗಿತು.


ಜಾತ್ರೆಯಲ್ಲಿ ಈ ಬಾರಿ ಅನ್ಯ ಕೋಮಿನವರಿಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಯ ಮುಖಂಡರುಗಳು ಕಟ್ಟು ನಿಟ್ಟಿನ ಕ್ರಮವನ್ನು ಮಾಡಿದ್ದರು. ಬಹತೇಕ ಅಂಗಡಿಗಳು ಹಿಂದೂಗಳದ್ದೇ ಕಂಡು ಬಂತು.
ರಥೋತ್ಸವದ ಬಳಿಕ ಸುಡು ಮದ್ದು ಪ್ರದರ್ಶನ ಈ ಹಿಂದಿನಂತೆ ಮುಸ್ಲಿಂ ಭಾಂದವರಿಂದಲೇ ನಡೆಯಿತು.

ದೇವಸ್ಥಾನದ ಸಮಿತಿಯ ಗೌರವಾಧ್ಯಕ್ಷ ವಿಠಲ್ ಹೆಗ್ಡೆ , ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ , ಆಡಳಿತ ಮೋಕ್ತೇಸರ ಮಂಜುನಾಥ್ ರಾವ್ , ಶ್ರೀನಿವಾಸ ಶೆಟ್ಟಿಗಾರ್ , ರಾಮಚಂದ್ರ ಕಾಮತ್, ಶ್ರೀನಿವಾಸ ಬಾಯರಿ ಇನ್ನಿತರರು ನೇತೃತ್ವ ವಹಿಸಿದ್ದರು.


































