ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಸೇವಾ ಸಂಗಮ ಶಿಶುಮಂದಿರದ ಬೈಂದೂರು ಶಿಶುಮಂದಿರ-ಬಾಲಗೋಕುಲ-ಮಾತೃಮಂಡಳಿ ವತಿಯಿಂದ 37ನೇ ವರ್ಷದ ವಾರ್ಷಿಕೋತ್ಸವ ಶುಕ್ರವಾರ ಸಂಜೆ 5.30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದೇಕೆಯಲ್ಲಿ
ಶಿಶುಮಂದಿರ ಪುಟಾಣಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಬಾಲಗೋಕುಲ ಬಾಲಕ- ಬಾಲಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಡಗರ ಸಂಭ್ರಮದಲ್ಲಿ ನಡೆಯಿತು.

ಚಂದ್ರಿಕ ಧನ್ಯ ಸೇವಾಸಂಗಮ ಕೃಷ್ಟಿನ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಕುಂದಾಪುರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರುಮಾತನಾಡುದರು.
ಶ್ರೀ ಪವನ್ ನಾಯಕ್ ಆರಕ್ಷಕ ಠಾಣ ಅಧಿಕಾರಿಗಳು ಬೈಂದೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಶಿಶುಮಂದಿರದ ಸ್ಥಾಪಕ ಸದಸ್ಯ ಸತ್ಯಾತ್ಮ ಜೋಶಿ,
21ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮ ಟೈಲರ್, 2020ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ ಪಡಿಯಾರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿ. ರಾಜೇಶ್ ಐತಾಳ, ಗಣೇಶ್ ಕಾರಂತ್, ದಿನೇಶ್ ಹಾಗೂ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರಾಜೇಶ ಮೊದಲಾದವರು ಉಪಸ್ಥಿತರಿದ್ದರು



































