ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ರಾಷ್ಟ್ರಿಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ ಬಿ. ಹಾದಿಮನೆಯವರಿಂದ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಮಹೇಶ ಆಸ್ಪತ್ರೆಯಿಂದ ಬ್ರಹ್ಮಾವರ ತನಕ ವಾಹನಗಳು ಮತ್ತು ಶಾಲಾ ಕಾಲೇಜು ಬಸ್ ನಿಲ್ದಾಣ ಕಛೇರಿಗಳು ಹೆಚ್ಚು ಇದ್ದು ಅತಿ ದಟ್ಟಣಿಯಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ಘಟನೆಯ ಗಂಭಿರತೆಗೆ ಹಲಾವಾರು ಮಾರ್ಪಾಡು ಮಾಡಿದ ಬಳಿಕ ಇದೀಗ ಮಂಗಳವಾರ ಸಂಜೆಯಿಂದ ಹೊತ್ತು ಹೆದ್ದಾರಿಯಲ್ಲಿ ದೂರದ ಬೆಳಗಾಂ ಮುಂಬೈ ಪೂನಾ ಸೆರಿದಂತೆ ಸ್ಥಳಿಯವಾಗಿ ಕುಂದಾಪುರ ಭಟ್ಕಳಕ್ಕೆ ಹೋಗುವ ಜನರನ್ನು ಹೆದ್ದಾರಿ ಬದಿಯಲ್ಲೆ ನಿಲ್ಲಿಸುವ ಮತ್ತು ಕೊಂಡೊಯ್ಯುವ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.

ಮಂಗಳವಾರ ಸಂಜೆಯಿಂದ ಗುರುನಾಥ್ ಬಿ.ಹಾದಿಮನೆಯರು ತಮ್ಮ ಸಿಬ್ಬಂದಿಗಳಾದ ಎ ಎಸ್ ಐ ಸುಂದರ್ ಶಾಂತರಾಜ್ ನಾರಾಯಣ ಮತ್ತು ರಾಜೇಶ್ , ಸಂದೀಪ್ , ನಾಗಶ್ರೀ, ಜಯಶ್ರೀ ಯವರೊಂದಿಗೆ ಬಸ್ ಸಂಚಾರದ ಎಲ್ಲಾ ವ್ಯವಸ್ಥೆಯನ್ನು ಬದಲಿಸಿ ಪ್ರತೀ ಬಸ್ ಗಳು ಬ್ರಹ್ಮಾವರ ಬಸ್ ನಿಲ್ದಾಣದ ಒಳಗೆ ಬಂದು ಹೋಗುವ ಪ್ರಕ್ರಿಯೆಗೊಳಿಸಿದರು. ಇದರಿಂದ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರತಿ ದಿನ ಕೂಡಾ ಅಫಘಾತ ಕ್ಕೆ ಠಾಣೆಗೆ ಬರುವ ಮತ್ತು ಸುಗಮ ಸಂಚಾರಕ್ಕೆ ಇದೊಂದು ಮಾದರಿ ಕ್ರಮವಾಗಿದೆ.

ಬಸ್ ನ ನಿರ್ವಾಹಕರು ಸಹ ಈ ದಿವಸ ನಮ್ಮ ಮನವಿಗೆ ಸ್ಪಂದಿಸಿ ಬಸ್ ಸ್ಟಾಂಡ್ ನ ಒಳಗೆ ನಿಲುಗಡೆ ಮಾಡಿದ್ದು, ತಮ್ಮ ಸಹಕಾರ ಇದೇ ರೀತಿ ಮುಂದುವರಿಸಿ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಲು ಈ ಮೂಲಕ ಮನವಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಚಾರಿ ಅವ್ಯವಸ್ಥೆ ಕುರಿತು ಈ ಹಿಂದೆ ದಿಕ್ಸೂಚಿ ನ್ಯೂಸ್ ವರದಿ ಮಾಡಿ ಗಮನಸೆಳೆಯಲಾಗಿತ್ತು.





































