ಉಡುಪಿ : ಯಕ್ಷಗಾನ ಕಲಾರಂಗ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ಅಂಬಲಪಾಡಿ ದೇವಳದ ವಠಾರದಲ್ಲಿ ನಡೆಸಿಕೊಂಡು ಬರುತ್ತಿದೆ.
ಏಪ್ರಿಲ್ 16 ರಂದು ಆರಂಭಗೊಂಡಿರುವ ಈ ಬಾರಿಯ ಶಿಬಿರಕ್ಕೆ ಇಂದು ಖ್ಯಾತ ಲೆಕ್ಕಪರಿಶೋಧಕರಾದ ಸಿಎ ಗಣೇಶ್ ಕಾಂಚನ್, ಸಮಾಜ ಸೇವಕ ವಿಶು ಶೆಟ್ಟಿ, ಎ. ಜೆ. ಎಸೋಸಿಯೇಷನ್ ನ ಆರ್ಕಿಟೆಕ್ಟ್ ಮತ್ತು ಎಂ.ಐ.ಟಿಯಲ್ಲಿ ಉಪನ್ಯಾಸಕರೂ ಆಗಿರುವ ಯೋಗೀಶ್ಚಂದ್ರಾಧರ ಆಗಮಿಸಿ ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಅವರು ತಮ್ಮ ಸಿಯಾಚಿನ್ ಪ್ರಯಾಣದ ವೀಡಿಯೋವನ್ನು ತೋರಿಸಿ ತನ್ನ ಅಪೂರ್ವ ಅನುಭವವನ್ನು ಹಂಚಿಕೊಂಡರು.