ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸರಕಾರ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಇಲಾಖಾ ಕೆಲಸವಾಗಲು ಅನುಕೂಲವಾಗುವಂತೆ 10 ವರ್ಷದ ಹಿಂದೆ ಮಾಡಲಾದ ಸಕಾಲ ಯೋಜನೆಯನ್ನು ಜನರಲ್ಲಿ ಅರಿವು ಮೂಡಿಸಲು ಬುಧವಾರ ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿಯವರು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಸಂದರ್ಭ ಅವರು ಮಾತನಾಡಿ, ಕಂದಾಯ ಇಲಾಖೆಯಲ್ಲಿ ಯಾವೂದೇ ಸರಕಾರಿ ಸೇವೆ ಪಡೆಯಲು ಪ್ರತಿಯೊಂದು ಕಛೇರಿಯಲ್ಲಿ ಸಕಾಲ ನಾಮ ಫಲಕ ಅಳವಡಿಸಲಾಗಿದೆ. ಆದರೂ ಕೂಡಾ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಉಪಯೋಗ ಜನರು ಪಡೆಯ ಬೇಕು ಎಂದರು.
ತಾಲೂಕು ಕಛೇರಿಯಿಂದ ಹೊರಟ ಜಾಥಾ ಬಸ್ ನಿಲ್ದಾಣದ ಬಳಿಯಿಂದ ಪೋಲೀಸ್ ಠಾಣೆ ರಸ್ತೆ, ರಥ ಬೀದಿ ಮೂಲಕ ಸಾಗಿ ಬಂತು.


ಉಪ ತಹಶೀಲ್ದಾರ್ ರಾಘವೇಂದ್ರ ನಾಯಕ್, ದೇವಕಿ, ರವಿಶಂಕರ್, ಕೋಟ ಮತ್ತು ಬ್ರಹ್ಮಾವರ ಕಂದಾಯ ನೀರೀಕ್ಷಕ ರಾಜು, ಲಕ್ಷ್ಮೀನಾರಾಯಣ ಭಟ್, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಚೆಲುವರಾಜು ಮತ್ತು ಅನೇಕ ಗ್ರಾಮ ಲೆಕ್ಕಿಗರು, ಸಿಬ್ಬಂದಿಗಳು ಜಾಥಾದಲ್ಲಿದ್ದರು.

































