ಅಂಗಾರಕ ಸಂಕಷ್ಟಿ; ಬಾರಕೂರು ಶ್ರೀಬಟ್ಟೆವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಂಗಾರಕ ಸಂಕಷ್ಟಿ ಪ್ರಯುಕ್ತ ಬಹುತೇಕ ಗಣಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚು ಕಂಡು ಬಂದಿದೆ. ಇತಿಹಾಸ ಪ್ರಸಿದ್ಧ ಬಾರಕೂರು ಶ್ರೀ ಬಟ್ಟೆವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಿದ್ದಾರೆ. ಗಣಪತಿ ದೇವರೀಗೆ ನಾನಾ ಪೂಜೆ ಅಭಿಷೇಕ ಗಣಹೋಮ ಸೇವೆಗಳು ಭಕ್ತರಿಂದ ಜರುಗಿತು.
ರಾತ್ರಿ ಚಂದ್ರೋದಯದ ಬಳಿಕ ಪೂಜೆ ಆದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಅರ್ಚಕ ಗಣಪತಿ ಭಟ್ ತಿಳಿಸಿದರು.