ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ಯುವತಿಯ ಮೇಲಿನ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಬಂಧನಕ್ಕಾಗಿ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ.
ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದನು. ಇದೀಗ ದಾಳಿಯಿಂದಾಗಿ ಯುವತಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದೀಗ ತಲೆ ಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಕುರಿತಂತೆ ಪೊಲೀಸರು ಎಲ್ಲಾ ರಾಜ್ಯಗಳಿಗೆ, ಎಲ್ಲಾ ಭಾಷೆಯಗಳಲ್ಲಿಯೂ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದು, ಆ್ಯಸಿಡ್ ದಾಳಿ ಮಾಡಿ ತಲೆ ಮರೆಸಿಕೊಂಡಿರುವಂತ ನಾಗೇಶ್ ಬಂಧನಕ್ಕಾಗಿ ಅಲರ್ಟ್ ಇರುವಂತೆ ಏರ್ ಪೋರ್ಟ್, ರೈಲ್ವೆ ಪೊಲೀಸರನ್ನು ಕೋರಿದ್ದಾರೆ.
ಇನ್ನೂ ಆಸಿಡ್ ದಾಳಿಯ ಬಳಿಕ ಪರಾರಿಯಾಗಿರುವಂತ ಆರೋಪಿ ನಾಗೇಶ್ ತಮಿಳುನಾಡಿನಲ್ಲಿ ಅವಿತಿರುವ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ತಮಿಳುನಾಡಿನ ದೇವಸ್ಥಾನವೊಂದರಲ್ಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಆ ದೇಗುಲಕ್ಕೂ ಕರ್ನಾಟಕ ಪೊಲೀಸರು ಭೇಟಿ ನೀಡಿ, ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.


































