ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸೋಮವಾರ ಪ್ರತಿಷ್ಠಾ ಮಹೋತ್ಸವ ಪರಮಪೂಜ್ಯ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರುಗಿತು.
ಇದೇ ಸಂದರ್ಭದಲ್ಲಿ ಕಚ್ಚೂರು ಶ್ರೀಕಾಳಿಕಾಂಬಾ ಮಹಿಳಾ ಬಳಗದ ವತಿಯಿಂದ ಕ್ಷೇತ್ರದ ತಂತ್ರಿಗಳಾದ ಲಕ್ಷ್ಮೀಕಾಂತ ಶರ್ಮ ಇವರ ಪ್ರಧಾನ ಆಚಾರ್ಯತ್ವದಲ್ಲಿ ಸಾಮೂಹಿಕ ಲಕ್ಷ ಕುಂಕುಮಾರ್ಚನೆ ಜರುಗಿತು.
Advertisement. Scroll to continue reading.


ಮಹಾ ಮಂಗಳಾರತಿಯ ಬಳಿಕ ಶ್ರೀಗಳು ಆಶೀರ್ವಚನ ನೀಡಿ ದೇವಿಗೆ ಭಕ್ತಿ ಪೂರ್ವಕವಾಗಿ ನೀಡುವ ಅನೇಕ ಅರ್ಚನೆ ಪೂಜೆಯಲ್ಲಿ ಕುಂಕುಮ ಅರ್ಚನೆ ಅತೀ ಶ್ರೇಷ್ಠವಾಗಿದೆ ದೇವಸ್ಥಾನದ ಪ್ರತಿಷ್ಠಾ ದಿನದಂದು ಭಕ್ತಿಯಿಂದ ಸಾಮೂಹಿಕವಾಗಿ ಸುಮಂಗಲೆಯರು ಮಾಡುವ ಅರ್ಚನೆ ದೇವಿಗೆ ಅತೀ ಪ್ರಿಯವಾಗುತ್ತದೆ ಎಂದರು.


ಬಳಿಕ ದೇವಸ್ಥಾನದಲ್ಲಿ ತುಲಾಭಾರ ಸೇವೆ, ಸಂಜೆ ರಂಗಪೂಜೆ ರಥೋತ್ಸವ ಜರುಗಿತು.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮ ಮೋಕ್ತೇಸರರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

In this article:barkur kalikamba temple, Diksoochi news, diksoochi Tv, diksoochi udupi
Click to comment

































