ಬರ್ಲಿನ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದು, ಅಲ್ಲಿ ಅನಿವಾಸಿ ಭಾರತೀಯರಿಂದ ಪ್ರಧಾನಿ ಮೋದಿಯವರಿಗೆ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕಾಗಿ ಕಾಯುತ್ತಿದ್ದ ಭಾರತೀಯ ಸಮುದಾಯದ ಸದಸ್ಯರು ‘2024: ಒನ್ಸ್ ಮೋರ್’ ಘೋಷಣೆಯನ್ನು ಕೂಗಿದ್ದಾರೆ.
2024 ಮೋದಿ ಒನ್ಸ್ ಮೋರ್’ ಘೋಷಣೆ ಪ್ರತಿಧ್ವನಿಸುತ್ತಿದ್ದಂತೆ ಸಭಾಂಗಣದಲ್ಲಿ ನೆರೆದಿದ್ದ ಜನರು ಧ್ವಜಗಳನ್ನು ಬೀಸಿದರು. ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಬರ್ಲಿನ್ನ ಪಾಟ್ಸ್ಡ್ಯಾಮರ್ ಪ್ಲಾಟ್ಜ್ನಲ್ಲಿರುವ ಥಿಯೇಟರ್ಗೆ ಆಗಮಿಸಿದ ಪ್ರಧಾನಿ ಮೋದಿ, ‘ಜರ್ಮನಿಯಲ್ಲಿ ‘ನಮ್ಮ ಭಾರತೀಯ ಮಕ್ಕಳನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರನ್ನು ಭೇಟಿಯಾಗಲು ಸಂತೋಷವಾಗಿದೆ. ಜರ್ಮನಿಯ ವಿವಿಧ ನಗರಗಳಿಂದ ಬರ್ಲಿನ್ಗೆ ನಿಮ್ಮಲ್ಲಿ ಹಲವರು ಬಂದಿದ್ದೀರಿ. ನನಗೆ ತುಂಬಾ ಸಂತೋಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು ನಾನು ನನ್ನ ಬಗ್ಗೆ ಅಥವಾ ಮೋದಿ ಸರ್ಕಾರದ ಬಗ್ಗೆ ಮಾತನಾಡಲು ಇಲ್ಲಿದ್ದೇನೆ. ನಾನು ಕೋಟಿಗಟ್ಟಲೆ ಭಾರತೀಯರ ಸಾಮರ್ಥ್ಯದ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಮತ್ತು ಹಾಡಿ ಹೊಗಳಲು ಬಯಸುತ್ತೇನೆ ಎಂದರು.


































