ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ಸಂಕಲ್ಪದಂತೆ ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಮಹಾ ಸ್ವಾಮೀಜೀ ಮತ್ತು ಶ್ರೀವಿಧುಶೇಖರ ಭಾರತೀ ಸ್ವಾಮೀಜಿಯವರ ಅನುಗ್ರಹದೊಂದಿಗೆ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀಶಂಕರತತ್ವ ಪ್ರಚಾರ, ಪ್ರಸಾರ ಅಭಿಯಾನ ಬ್ರಹ್ಮಾವರ ತಾಲೂಕಿನ ನಾನಾ ಭಾಗದಲ್ಲಿ ಶಂಕರಾಚಾರ್ಯರ ತತ್ವ ಮಹತ್ವದ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.

ವಿಶ್ವನಾಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಸವಿತಾ ಎರ್ಮಾಳ್ ಕಾರ್ಯದರ್ಶಿಯಾಗಿ ದೇವಸ್ಥಾನ, ಸಂಘ, ಸಂಸ್ಥೆ , ಮನೆ ಮನಗಳಲ್ಲಿ ಮೇ 1 ರಿಂದ 15 ರತನಕ ಶ್ರೀ ಶಂಕರರ ಪ್ರಸಾರ ಅಭಿಯಾನ ಕಾರ್ಯದಿಂದ ಸನಾತನ ಧರ್ಮದ ಪುನರುತ್ಥಾನದ ಜಾಗೃತಿ ಮೂಡಿಸುತ್ತಿದೆ.

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದವಲ್ಲದೆ ವಿಶ್ವದಲ್ಲಿ ಸನಾತನ ಸಂಸ್ಕೃತಿಯನ್ನು ಮರುಸ್ಥಾಪಿಸಲು ಕಾರಣರಾದ ಅವತಾರ ಪುರುಷರಾದ ಶಂಕರಾಚಾರ್ಯರು ಅವತರಿಸದೆ ಇದ್ದರೆ ಹಿಂದುಗಳು ಹಲವಾರು ಆಮಿಷದಿಂದ ನಾನಾ ಧರ್ಮಗಳಿಗೆ ಮತಾಂತರವಾಗುವುದನ್ನು ಉಳಿಸಿದ್ದಾರೆ ಅವರ ಕುರಿತ ಪ್ರಸಾರ ಕಾರ್ಯಕ್ಕೆ ಎಲ್ಲರೂ ಕೈ ಜೊಡಿಸ ಬೇಕು ಎಂದರು.
ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.


ಬ್ರಹ್ಮಾವರ ತಾಲೂಕಿನಲ್ಲಿ ನಾನಾ ಭಾಗದಲ್ಲಿ ಪ್ರತೀ ದಿನ ಎರಡು ತಂಡದಿಂದ 50 ಕಡೆ 16 ನೇ ತಾರೀಕಿನ ತನಕ ನಾನಾ ವಿದ್ವಾಂಸರಿಂದ ಉಪನ್ಯಾಸ ನಡೆಯುತ್ತಿದೆ.ರವೀಂದ್ರ ಹೆಬ್ಬಾರ್, ಬ್ರಹ್ಮಾವರ ತಾಲೂಕು ಸಂಚಾಲಕರು


































