ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಸರಸ್ವತಿನಾರಾಯಣಿ ದೇವಸ್ಥಾನ ಮಹಾಲಕ್ಷ್ಮೀ ಕ್ಷೇತ್ರ ಮೂಡುಕೇರಿ ಬಾರಕೂರಿನಲ್ಲಿ ಶುಕ್ರವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ದೇವಿಯ ಪುನ: ಪ್ರತಿಷ್ಠೆ ಜರುಗಿತು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರವನ್ನು ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಸೋಮಯಾಜಿ ಉದ್ಘಾಟಿಸಿದರು.

ಧಾರ್ಮಿಕ ಉಪನ್ಯಾಸ ನೀಡಿದ ಡಾ.ಮಹೇಶ್ ಭಟ್ ಹಾರ್ಯಾಡಿ ಮಾತನಾಡಿ, ಸರಸ್ವತೀ ದೇವಸ್ಥಾನಗಳು ಬಹಳ ವಿರಳ ಮತ್ತು ಒಂದೇ ಬಿಂಬದಲ್ಲಿ 2 ಹೆಸರು ಲಕ್ಷ್ಮೀ ಮತ್ತು ಸರಸ್ವತೀಯ 2 ಶಕ್ತಿಗಳು ಅಡಕವಾಗಿರುವುದು ಬಹಳ ಶಕ್ತಿಶಾಲಿ ಎಂದರು.

ಪ್ರತೀ ವಿಗ್ರಹಕ್ಕೆ 12 ವರ್ಷಕ್ಕೆ ಒಮ್ಮೆ ಬ್ರಹ್ಮಕಲಶೋತ್ಸವ ಮಾಡಿದರೆ ಗ್ರಾಮಕ್ಕೆ , ಜನರಿಗೆ ಸಮಾಜಕ್ಕೆ ಸುಬೀಕ್ಷೆಯಾಗುತ್ತದೆ ದೇವರು ಮತ್ತು ದೇವಸ್ಥಾನದ ಮೂಲಕ ಸಮಾಜ ಒಂದಾಗಲು ಪೂರಕ ವ್ಯವಸ್ಥೆಯಾಗುತ್ತದೆ ಎಂದರು.


ಇದೇ ಸಂದರ್ಭದಲ್ಲಿ ದೇವಸ್ಥಾನದ ಜಿರ್ಣೋದ್ಧಾರಕ್ಕೆ ನೆರವು ನೀಡಿದವರನ್ನು ಸನ್ಮಾನಿಸಲಾಯಿತು.
ಸುರೇಶ್ ನಾಯಕ್ ಪರ್ಕಳ ಅಧ್ಯಕ್ಷತೆ ವಹಿಸಿದ್ದರು.
ಸರಸ್ವತಿನಾರಾಯಣಿ ದೇವಸ್ಥಾನದ ಆಡಳಿತ ಮೋಕ್ತೇಸರ ಶಂಕರ ನಾಯಕ್ , ಅಧ್ಯಕ್ಷ ಗೋವಿಂದ ನಾಯಕ್ , ಡಾ ಪ್ರಭಾಕರ ನಾಯಕ್ , ಶಾರದಾ ರಘುರಾಮ ನಾಯಕ್ , ಡಾ ಸುರೇಶ್ ನಾಯಕ್ ಕುಂಭಾಶಿ ಉಪಸ್ಥಿತರಿದ್ದರು.
ಪ್ರವೀಣ್ ಚಂದ್ರ ನಾಯಕ್ ಆತ್ರಾಡಿ ಸ್ವಾಗತಿಸಿ, ರಾಘವೇಂದ್ರ ಮತ್ತು ರತ್ನಾಕರ ಹೆಸ್ಕುಂದ ಕಾರ್ಯಕ್ರಮ ನಿರೂಪಿಸಿ, ಸುಧಾಕರ ವಂದಿಸಿದರು.




































