Connect with us

Hi, what are you looking for?

Diksoochi News

ಕರಾವಳಿ

ಪರ್ಕಳ : ಬಿರು ಬೇಸಿಗೆಯಲೂ ಉಕ್ಕಿ ಹರಿಯುತ್ತಿರುವ ನೀರು!

2


ಪರ್ಕಳ: ಕೆಳಪರ್ಕಳದಲ್ಲಿ ನೀರು ಹರಿಯುವ ತೋಡಿನಲ್ಲಿ ಸುಡು ಬೇಸಿಗೆಯಲ್ಲಿ ಯಥೇಚ್ಛವಾಗಿ ನೀರು ಹರಿಯಲಾರಂಭಿಸಿದೆ. ಈ ಭಾಗದಲ್ಲಿ ಮೇ ತಿಂಗಳಿನಲ್ಲಿ ಬೃಹದಾಕಾರದ ಕಿಂಡಿ ಅಣೆಕಟ್ಟು ಕೂಡ ಕಾಮಗಾರಿ ಆರಂಭಿಸಿದ್ದಾರೆ. ಎರಡು ಮೂರು ವಾರಗಳಿಂದ ಕಾಮಗಾರಿಗೆ ನೀರಿನ ವರಸೆಯಿಂದ ಹಿನ್ನಡೆಯಾಗಿದೆ.

ಆದರೂ ಭಗೀರಥ ಪ್ರಯತ್ನದಿಂದ ಕಿಂಡಿ ಅಣೆಕಟ್ಟು ಕಾಮಗಾರಿ ಭರದಿಂದ ಸಾಗಿದೆ. ಈ ಹಿಂದೆ ಈ ಭಾಗದಲ್ಲಿ ಹೆಚ್ಚಿನ ಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿತ್ತು. ಮತ್ತೆ ನೀರು ನೀರು ಹರಿಯುವ ತೋಡಿನಲ್ಲಿ ಈ ಬಾರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯಲಾರಂಭಿಸಿದೆ. ಪ್ರಕೃತಿಯಲ್ಲಿ ಇಂತಹ ವೈಶಿಷ್ಟೆ ಕಾಣುವುದು. ಅಪರೂಪವೇ ಆಗಿದೆ. ಈ ಹಿಂದೆ ಭೂತಜ್ಞರು ಕೂಡ ಭಾಗಕ್ಕೆ ಬಂದು ಅಧ್ಯಯನ ನಡೆಸಿದ್ದಾರೆ. ಮತ್ತೆ ತೋಡಿನಲ್ಲಿ ನೀರು ಹರಿಯಲಾರಂಭಿಸಿ, ಕೌತುಕಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತಗಳಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!