ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಂದಾಡಿ ಐದುಬೆಟ್ಟು ವೈದ್ಯನಾಥ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಜೀಣೋದ್ಧಾರದ ಅಂಗವಾಗಿ ಭಾನುವಾರ ಬೆಳಿಗ್ಗೆ ಭಜನೆ ಹಾಗೂ ಮುಷ್ಠಿ ಕಾಣಿಕೆ ಕಾರ್ಯಕ್ರಮ ಜರುಗಿತು.

ಮೂಡುಗಣಪತಿ ಕಲಾ ಭಜನಾ ಮಂಡಳಿ ಕುಮ್ರಗೋಡು ಮತ್ತು ಶ್ರೀಮಂಜುನಾಥೇಶ್ವರ ಭಜನಾ ಮಂಡಳಿ ಬ್ರಹ್ಮಾವರ ಇಲ್ಲಿನ ಸದಸ್ಯರಿಂದ ಕುಣಿತ ಭಜನೆ ಜರುಗಿತು.

ಅತ್ಯಂತ ಕಾರಣಿಕದ ಈ ದೈವಸ್ಥಾನದಲ್ಲಿ ನಾಗಬ್ರಹ್ಮ ಸೇರಿದಂತೆ ಅನೇಕ ಪರಿವಾರ ದೈವಗಳು ನೆಲೆನಿಂತು ಭಕ್ತರನ್ನು ಹರಸುತ್ತಿದೆ.
ತೀರಾ ಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಊರ ಜನರು ಪ್ರಶ್ನೆ ಚಿಂತನೆಯಲ್ಲಿ ಕಂಡುಕೊಂಡಂತೆ ಜೀಣೋದ್ಧಾರದ ಸಂಕಲ್ಪ ಮಾಡಿ ಸಮಿತಿಯೊಂದನ್ನು ರಚಿಸಿದ್ದಾರೆ.

ಭಾನುವಾರ ಹಲವಾರು ಮಂದಿ ಆಗಮಿಸಿ ಮುಷ್ಠಿಕಾಣಿಕೆ ಸಮರ್ಪಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಸಮಿತಿಯ ಗೌರವಾಧ್ಯಕ್ಷ ಶೀನ ಪೂಜಾರಿ, ಅಧ್ಯಕ್ಷ ಶ್ರೀನಿವಾಸ ಶೆಟ್ಟಿ , ಕಾರ್ಯದರ್ಶಿ ಶೇಖರ ಪೂಜಾರಿ , ಖಜಾಂಚಿ ಸುರೇಶ್ ಪೂಜಾರಿ, ಶಿವ ಗುರಿಕಾರ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.





































