ಅಜೆಕಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಡಾರು ಗ್ರಾಮದ ಮುಟ್ಲುಪಾಡಿಯಲ್ಲಿ ನಡೆದಿದೆ.
ಸುಜಾತಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಸುಜಾತಾ ಮುಟ್ಲುಪಾಡಿ ಶಾಲೆಯ ಬಳಿ ತನ್ನ ತಾಯಿಯೊಂದಿಗೆ ವಾಸವಾಗಿದ್ದು,ಮಾನಸಿಕಳಂತೆ ಒಬ್ಬಳೇ ಮಾತನಾಡುತ್ತಾ ಕೊರಗುತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.

ಈ ಬಗ್ಗೆ ಹೆಬ್ರಿಯ ಮಾನಸಿಕ ಆಸ್ವತ್ರೆಯಿಂದ ಚಿಕಿತ್ಸೆ ಕೊಡಿಸಿ ಮದ್ದನ್ನು ಕೊಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ ತಾಯಿ ಹೊರಗೆ ಹೋದ ವೇಳೆ ಸುಜಾತಾ ಮನೆಯ ಕೋಣೆಯಲ್ಲಿನ ಮರದ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:Ajekar, diksoochi Tv, diksoochi udupi, Diksoochinews, hebri, Sucide
Click to comment

































