ಕುಂದಾಪುರ : ಛಾಯಾಗ್ರಾಹಕ ಅಮೃತ್ ಬೀಜಾಡಿ ಅವರಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಜೊತೆಗೆ ಚಿನ್ನದ ಪದಕ ಲಭಿಸಿದೆ.
ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೃತ್ ಬೀಜಾಡಿ ಅವರು ಕೇರಳದಲ್ಲಿ ಸೆರೆಹಿಡಿದಿದ್ದ ‘ಥೈಯ್ಯಂ’ ಛಾಯಾಚಿತ್ರಕ್ಕೆ ಎಫ್ ಎಸ್ ಗೋಲ್ಡ್ ಮೆಡಲ್ ಹಾಗೂ 8 ಎಕ್ಸೆಪ್ಟೆನ್ಸ್ ಪ್ರಶಸ್ತಿಗಳು ಲಭಿಸಿವೆ.
ಆರಂಭದಲ್ಲಿ ಫೋಟೋಗ್ರಾಫಿಯನ್ನು ಹವ್ಯಾಸವಾಗಿ ಆರಂಭಿಸಿದ್ದ ಕುಂದಾಪುರದ ಅಮೃತ್ ಬೀಜಾಡಿ ಬಳಿಕ ಅದನ್ನೇ ವೃತ್ತಿಯನ್ನಾಗಿ ಮುಂದುವರೆಸಿದರು.
Advertisement. Scroll to continue reading.

ಸಾಮಾಜಿಕ ಜಾಲತಾಣಗಳಲ್ಲಿ ಅಮೃತ್ ಕ್ಲಿಕ್ಕಿಸಿರುವ ಫೋಟೋಗಳು ಎಲ್ಲರ ಮೆಚ್ಚುಗೆ ಪಡೆಯುತ್ತಿರುತ್ತವೆ. ಅವರ ಛಾಯಾಚಿತ್ರಗಳಲ್ಲಿ ಹೊಸತನವನ್ನು ಕಾಣಬಹುದಾಗಿದೆ. ದಿಕ್ಸೂಚಿ ನ್ಯೂಸ್ ಕಡೆಯಿಂದ ಅಭಿನಂದನೆಗಳು.


































