ನವದೆಹಲಿ: ಸಂತೂರ್ ಮಾಂತ್ರಿಕ ಮತ್ತು ಸೂಫಿ ನಿರೂಪಕ ಪಂಡಿತ್ ಭಜನ್ ಸೊಪೊರಿ ಅವರು ಗುರುಗ್ರಾಮದಲ್ಲಿ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಾಂತ್ರಿಕ ನಿಧನರಾಗಿದ್ದು, ಅವರಿಗೆ 73 ವರ್ಷ ವಯಸ್ಸಾಗಿತ್ತು. ಸೊಪೊರಿಯವರು ಅವರ ಪತ್ನಿ ಮತ್ತು ಇಬ್ಬರು ಪುತ್ರರಾದ ಸೊರಭ್ ಮತ್ತು ಅಭಯ್ ಅವರನ್ನು ಅಗಲಿದ್ದಾರೆ.
1948 ರಲ್ಲಿ ಶ್ರೀನಗರದಲ್ಲಿ ಜನಿಸಿದ ಅವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಡಬಲ್ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದರು. ಸಿತಾರ್ ಮತ್ತು ಸಂತೂರ್ ಎರಡರಲ್ಲೂ ಪರಿಣತಿ ಪಡೆದರು. 1953ರಲ್ಲಿ 5ವರ್ಷದವರಾಗಿದ್ದಾಗ ಸೊಪೊರಿ ಮೊದಲ ಪ್ರದರ್ಶನ ನೀಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಈಜಿಪ್ಟ್, ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕದಲ್ಲಿಯೂ ಅವರು ಪ್ರದರ್ಶನ ನೀಡಿದ್ದಾರೆ.
Advertisement. Scroll to continue reading.

ಸಂತ ಸಂತೂರ್ ಎಂದು ಕರೆಯಲ್ಪಡುವ ಅವರಿಗೆ ಪದ್ಮಶ್ರೀ ಮತ್ತು ಭಾರತೀಯ ಸಂಗೀತಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು.
In this article:Diksoochi news, diksoochi udupi, Pandit Bhajan Sopori, Santoor maestro, Sufi exponent
Click to comment

































