Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ನೇತೃತ್ವದ ಕಂದಾಯ ಇಲಾಖೆ ತಂಡದ ಕಾರ್ಯಕ್ಷಮತೆ ಮೆಚ್ಚಿ ಸಿಎಂಗೆ ಪತ್ರ ಬರೆದ ಮಹಿಳೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ತಾಲೂಕು ತಹಶೀಲ್ದಾರರು ಕಂದಾಯ ಇಲಾಖೆಯ ಕಾರ್ಯದ ವೇಗವನ್ನು ಹೆಚ್ಚಿಸಿದ ಮತ್ತು ಸಾಮಾಜಿಕ ನ್ಯಾಯ ನೀಡಿದ ತಹಶೀಲ್ದಾರ ರಾಜಶೇಖರ ಮೂರ್ತಿಯವರ ನೇತೃತ್ವದ ಕಂದಾಯ ಇಲಾಖೆಯ ತಂಡದ ಕಾರ್ಯಕ್ಷಮತೆಯನ್ನು ಮೆಚ್ಚಿ ರಾಜ್ಯ ಮುಖ್ಯಮಂತ್ರಿಗಳಿಗೆ, ವಿಧವಾ ಮಹಿಳೆಯೊಬ್ಬರು ಅಭಿನಂದನಾ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ.


ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಗಿರಿಜಮ್ಮ ಎನ್ನುವವರ ಗಂಡ , ಪುಟ್ಟ ಮರ್ಕಳ ರವರು ಬಿಲ್ಲಾಡಿ ಗ್ರಾಮದ ಸರ್ವೆ ನಂಬರ್ 119 / 1 ಕ್ಕೆ ಸರಕಾರಕ್ಕೆ ಶುಲ್ಕ ನೀಡಿ ಪಡೆದ ಭೂಮಿಯನ್ನು, ಅವರು ನಿಧನರಾದ ಬಳಿಕ ಗಿರಿಜಮ್ಮ ಮತ್ತು ಮಕ್ಕಳಾದ ನಾಗರತ್ನ ,ಮಂಜುಳಾ ರವರು ನೀಡಿದ ಅರ್ಜಿಯಂತೆ ಇತ್ಯರ್ಥ ಮಾಡಿ ಹೊಸ ಪಹಣಿ ನೀಡಿದ ಕುರಿತು ಗಿರಿಜಮ್ಮ , ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕೃತಜ್ಞತಾ ಪತ್ರ ಬರೆದಿದ್ದಾರೆ. ಇದರಲ್ಲಿ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಸರ್ವೆ ಸುಪರ್ ವೈಸರ್ ಮಂಜು ಪೂಜಾರಿ, ಉಪ ತಹಶೀಹಲ್ದಾರ್ ರಾಘವೇಂದ್ರ ನಾಯಕ್, ಕಂದಾಯ ನಿರೀಕ್ಷಕ ರಾಜು ಮತ್ತು ಗ್ರಾಮ ಲೆಕ್ಕಿಗರ ಕಾರ್ಯ ವೈಖರಿಯನ್ನು ಸ್ಮರಿಸಿದ್ದಾರೆ.

Advertisement. Scroll to continue reading.


ಹಲವಾರು ತೊಡಕುಗಳನ್ನೇ ಹೇಳಿ ದೂರದ ಕಛೇರಿಗಳಿಗೆ ಅಲೆದು ಸುಸ್ತು ಹೊಡೆಯುವ ಜನಸಾಮಾನ್ಯರಿಗೆ ತ್ವರಿತವಾಗಿ ಜನರ ಸಮಸ್ಯೆಯನ್ನು ಪರಿಹರಿಸುವ ಇಂತಹ ಅಧಿಕಾರಿಗಳು ಕಂದಾಯ ಇಲಾಖೆಯ ಗೌರವಕ್ಕೆ ಭಾಜನರಾಗುತ್ತಾರೆ ಎಂದು ಇಲಾಖಾಧಿಕಾರಿಗಳನ್ನು ಮೆಚ್ಚಿ ಉಡುಪಿ ಜಿಲ್ಲಾಧಿಕಾರಿ ಅವರಿಗೂ ಕೂಡಾ ಒಂದು ಪ್ರತಿಯನ್ನು ಇರಿಸಿದ್ದಾರೆ.


ತಹಶೀಲ್ದಾರ ರಾಜಶೇಖರ ಮೂರ್ತಿಯವರು ಕಂದಾಯ ಇಲಾಖೆಯ ಕೆಲಸವನ್ನು ಮೆಚ್ಚಿ ಗ್ರಾಮೀಣ ಭಾಗದ ಮಹಿಳೆಯೊಬ್ಬರು ಲಿಖಿತವಾಗಿ ಮುಖ್ಯ ಮಂತ್ರಿಯವರಿಗೆ ಬರೆದ ಮೊದಲ ವ್ಯಕ್ತಿಗೆ ಲಿಖಿತವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾವಿರಾರು ವರ್ಷದ ಇತಿಹಾಸ ಇರುವ ಕಂದಾಯ ಇಲಾಖೆ , ದಕ್ಷ ಹಾಗೂ ಪ್ರಾಮಾಣಿಕ ಜನಸ್ನೇಹಿ ಅಧಿಕಾರಿಗಳು ಸರಕಾರದ ಹಲವಾರು ಯೋಜನೆಯನ್ನು ಸಕಾಲದಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ. ಟೀಕೆ ಮತ್ತು ಒತ್ತಡದ ನಡುವೆ ಕೆಲಸ ಮಾಡುವ ಕಂದಾಯ ಇಲಾಖೆಯಲ್ಲಿ ದುಡಿಯುವವರಿಗೆ ಇಂತಹ ಶ್ಲಾಘನೆ ಹೆಚ್ಚು ಉತ್ಸಾಹ ನೀಡುತ್ತದೆ ಎಂದು ಗಿರಿಜಮ್ಮರಿಗೆ ಕೃತಜ್ಞತೆಗೆ ಸಲ್ಲಿಸಿದ್ದಾರೆ.


ಕೆಲವೇ ವರ್ಷದ ಹಿಂದೆ ತಾಲೂಕು ಆದ ಬ್ರಹ್ಮಾವರಕ್ಕೆ ಕೇವಲ ಒಂದು ವರ್ಷದ ಅವಧಿಯ ಹಿಂದೆ ಬ್ರಹ್ಮಾವರಕ್ಕೆ ಬಂದ ತಹಶೀಲ್ದಾರ ರಾಜಶೇಖರ ಮೂರ್ತಿಯವರು ಇಂತಹ ಅನೇಕ ಹಳೆ ಸಮಸ್ಯೆಗಳನ್ನು ಮತ್ತು ದಾರಿಯ ಸಂಘರ್ಷಗಳನ್ನು ಸ್ವತ: ನಿಂತು ಸಾಮರಸ್ಯದಿಂದ ಬಗೆಹರಿಸಿರುವುದು. ಕಂದಾಯ ಇಲಾಖೆಯಲ್ಲಿರುವ ಹಳೆಯ ಕಡತವನ್ನು ತ್ವರಿತವಾಗಿ ವಿಲೇವಾರಿ ಮಾಡಿದ್ದುದು ಇದೆ. ಕೆಟ್ಟ ಅಧಿಕಾರಿಗಳನ್ನೇ ಕಂಡ ಜನರು, ದಕ್ಷ ಅಧಿಕಾರಿಗಳ್ನು ಶ್ಲಾಘಿಸುವುದು ಉತ್ತಮ ಬೆಳವಣಿಗೆಯಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!