ವರದಿ : ದಿನೇಶ್ ರಾಯಪ್ಪನಮಠ
ಧ್ಯಾನದ ಮೂಲಕ ಮನಸ್ಸಿನ ಮೇಲಿನ ಹಿಡಿತ ಸಾಧಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಲು ಸಾಧ್ಯ,ಅದೆಷ್ಟೋ ಅನಾರೋಗ್ಯ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡವರಿದ್ದಾರೆ. ಧ್ಯಾನ,ಯೋಗ, ಆಯುರ್ವೇದ ದಿಂದ ರೋಗವಿಲ್ಲ ಎಂದು ಕುಂದಾಪುರ ವಕೀಲ ರವಿಕಿರಣ ಮುರುಡೇಶ್ವರ ಹೇಳಿದರು. ಅವರು ಆಲೂರು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಆಶ್ರಯದಲ್ಲಿ ನಿರ್ಮಿಸಿದ ಧ್ಯಾನ ಕುಟೀರ ಕೇಂದ್ರ ಮಂಗಳವರ ಉದ್ಘಾಟಿಸಿ ಮಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ ಕುಮಾರ್ ಶೆಟ್ಟಿ, ಕುಂದಾಪುರ ಸೌತ್ ರೋಟರಿ ಅಧ್ಯಕ್ಷ ಮಹೇಂದ್ರ ಶೆಟ್ಟಿ, ಹಿರಿಯ ಪತ್ರಕರ್ತ ವಸಂತ ಗಿಳಿಯಾರು, ಪ್ರಗತಿಪರ ಕೃಷಿಕ ಮಹಾಬಲೇಶ್ವರ ಬಾಯಿರಿ, ಕಲಾವತಿ ಎಂ.ಬಾಯಿರಿ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ರಾಜೇಶ್ ಬಾಯಿರಿ ಸ್ವಾಗತಿಸಿ, ವಂದಿಸಿದರು. ಆರಾಧ್ಯಾ ಬಾಯಿರಿ ಪ್ರಾರ್ಥಿಸಿದರು.
ಚಿತ್ರಕೂಟ ಚಿಕಿತ್ಸಾಲಯ ಸಹಾಯಕ ವೈದ್ಯಾಧಿಕಾರಿ ಡಾ.ಅನುಲೇಖಾ ಬಾಯಿರಿ ನಿರೂಪಿಸಿದರು.




































