ಬೆಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರು ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆದು ಪರಿಶೀಲನೆ ನಡೆಸುವುದಕ್ಕೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಬ್ರೇಕ್ ಹಾಕಿದ್ದಾರೆ.
ಇನ್ನು ಮುಂದೆ ಸಂಚಾರಿ ಪೊಲೀಸರು ಎಲ್ಲೆಂದರಲ್ಲಿ ವಾಹನ ತಡೆಯದಂತೆ ಡಿಜಿ ಮತ್ತು ಐಜಿಪಿ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು ಟ್ವಿಟ್ಟರ್ ಅವರು ಸ್ಪಷ್ಟ ಪಡಿಸಿದ್ದಾರೆ. ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆಯುವಂತಿಲ್ಲ. ಸಂಚಾರಿ ನಿಮಯ ಉಲ್ಲಂಘನೆಯ ಬಗ್ಗೆ ನಿಗಾ ವಹಿಸಬೇಕು. ಸುಖಾ ಸುಮ್ಮನೆ ವಾಹನಗಳನ್ನು ತಡೆದು ಪರಿಶೀಲಿಸಬೇಡಿ ಎಂದು ಹೇಳಿದ್ದಾರೆ.
Advertisement. Scroll to continue reading.

ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಮಾತ್ರವೇ ವಾಹನ ಸವಾರರನ್ನು ತಡೆದು, ತಪಾಸಣೆ ನಡೆಸಬೇಕು. ಅನಗತ್ಯವಾಗಿ ಎಲ್ಲೆಂದರಲ್ಲಿ ತಡೆಯಬಾರದು ಎಂದು ಸೂಚಿಸಿದ್ದಾರೆ.
In this article:Diksoochi news, diksoochi Tv, diksoochi udupi, Praveen Sood, Traffic police
Click to comment

































