ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಅಪರಿಚಿತ ಮಹಿಳೆಯೊಬ್ಬರು ಹೆಬ್ರಿಯ ರಾಮಮಂದಿರ ಕೆರೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.ಈಕೆ ಮೂಲತಃ ದಾವಣಗೆರೆ ನಿವಾಸಿಯಾಗಿದ್ದು ಕೆಲವು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಅಲ್ಲಿಂದ ಹೇಗೋ ನಾಪತ್ತೆಯಾಗಿದ್ದು ಈ ಬಗ್ಗೆ ಆಕೆಯ ಮನೆಯವರು ಸಾಮಾಜಿಕ ಜಾಲತಾಣಗಳಲ್ಲಿ ನಾಪತ್ತೆಯಾದ ಸುದ್ದಿಯನ್ನು ಹಾಕಿದ್ದರು.
ಮಂಗಳೂರಿನಿಂದ ಹೆಬ್ರಿಗೆ ಬಂದ ಮಹಿಳೆ ನಿನ್ನೆ ಸಂಜೆ ಹೆಬ್ರಿಯ ರಾಮಮಂದಿರ ದ ಕೆರೆ ಬಳಿ ಅಳುತ್ತಾ ಕೆರೆಗೆ ಹಾರುವ ಸಮಯದಲ್ಲಿ ಸ್ಥಳೀಯರು ಗಮನಿಸಿ ಈಕೆಯನ್ನು ತಡೆದು ಹೆಬ್ರಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಮಾಲತಿಯವರಿಗೆ ವಿಷಯ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ತಡೆದು ಸಮಾಧಾನ ಪಡಿಸಿ ಹೆಬ್ರಿ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಮಹಿಳೆಯನ್ನು ವಿಚಾರಿಸಿ ಆಕೆಯ ಮನೆಯವರಿಗೆ ವಿಷಯವನ್ನು ತಿಳಿಸಿದ್ದಾರೆ.


ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್. ಕೆ. ಸುಧಾಕರ್, ಸಿಬ್ಬಂದಿ ಪ್ರಸಾದ್ ಶೆಟ್ಟಿ, ರಾಮಮಂದಿರದ ಉಮೇಶ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸುವುದರಲ್ಲಿ ಸಹಕರಿಸಿದರು.


































