ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ನಿರಂತರ ಚಾರಿಟೇಬಲ್ ಟ್ರಸ್ಟ್ ಕೊಕ್ಕರ್ಣೆ ಇವರ ವತಿಯಿಂದ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕೊಡಮಾಡಿದ ಹೊರರೋಗಿಗಳಿಗೆ 3 ಕಿಡ್ನಿ ಡಯಾಲಿಸಿಸ್ ಕೇಂದ್ರ ವನ್ನು ಬುಧವಾರ ಉಡುಪಿ ಶಾಸಕ ರಘುಪತಿ ಉದ್ಘಾಟಿಸಿದರು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕುಮುಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ್ ಕೆ. ಶೆಟ್ಟಿ ಮಾತನಾಡಿ ಕರಾವಳಿ ಜಿಲ್ಲೆಯ ಉಡುಪಿ ಮೊದಲಿನಿಂದಲೂ ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಸೇರಿದಂತೆ ಇಡೀ ಜಗತ್ತಿಗೆ ಬೇಕಾದ ಮೊದಲ ಕೊಡುಗೆ ನೀಡುವ ಗುಣ ಹೊಂದಿದವರು ನಿರಂತರ ಚಾರಿಟೇಬಲ್ ಟ್ರಸ್ಟ್ ಇಲ್ಲಿನ ಆಸ್ಪತ್ರೆಗೆ ಕಿಡ್ನಿ ಡಯಾಲಿಸಿಸ್ ಯಂತ್ರ ನೀಡಿ ಮಹಾನ್ ಕಾರ್ಯ ಮಾಡಿದೆ ಎಂದರು.

ಸ್ಥಾಪಕ ಅಧ್ಯಕ್ಷ ಕೆ. ನಿರಂಜನ್ ಶೆಟ್ಟಿ, ಡಾ.ಪ್ರವೀಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಕೊಕ್ಕರ್ಣೆ ,ಹಂದಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಪೂಜಾರಿ ನಿವೃತ್ತ ಕಾರ್ಯನಿರ್ವಣಾಧಿಕಾರಿ ದಾಮೋದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಧರ್ಮ ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಈ ಬಾರಿ ನಮ್ಮ ಈ ಭಾಗದ ಅನೇಕ ಜನರು ಕಿಡ್ನಿ ಡಯಾಲಿಸೀಸ್ ಸಂಕಷ್ಟ ಎದುರಿಸುತ್ತಿರುವುದು ಗಮನಕ್ಕೆ ಬಂದ ಕಾರಣ ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ 3 ಡಯಾಲಿಸೀಸ್ ಯಂತ್ರಗಳನ್ನು ನೀಡಿದ್ದೇವೆ. ಇದರಿಂದ ಈ ಭಾಗದ ಅನೇಕರಿಗೆ ಉಪಯುಕ್ತವಾಗಲಿದೆ.ಕೆ. ನಿರಂಜನ್ ಶೆಟ್ಟಿ, ಸ್ಥಾಪಕಾಧ್ಯಕ್ಷ




































