ಶಿವಮೊಗ್ಗ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತೋಟದಕೆರೆ ಕ್ರಾಸ್ ಬಳಿ ನಡೆದಿದೆ. .
ಶಿವಮೊಗ್ಗ ದಿಂದ ಎನ್ ಆರ್ ಪುರ ಕೊಪ್ಪ ಕಡೆಗೆ ಹೋಗುವ ಕೆ ಕೆ ಬಿ ಬಸ್ ಹಾಗೂ ಎನ್ ಆರ್ ಪುರ ದಿಂದ ಶಿವಮೊಗ್ಗ ಕ್ಕೆ ಬರುವ ಕೆ ಎಸ್ ಆರ್ ಟಿ ಸಿ ಬಸ್ ಉಬಲೇಬೈಲು ಗ್ರಾಮ ಪಂಚಾಯಿತಿಯ ತೋಟದಕೆರೆ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ಬಸ್ ನಲ್ಲಿದ್ದಂತ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಅಲ್ಲದೇ ಹಲವರ ಸ್ಥಿತಿ ಗಂಭೀರಗೊಂಡಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement. Scroll to continue reading.

ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































