ಪರ್ಕಳ : ಕಂಟೇನರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿ ಬಿದ್ದಿರುವ ಘಟನೆ ಕೆಳಪರ್ಕಳದ ತಿರುವಿನಲ್ಲಿ ನಡೆದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಕಂಟೇನರ್ ನಲ್ಲಿ ಕಾರ್ಕಳ ದಿಂದ ಗೋವಾ ಕಡೆಗೆ ರದ್ದಿ ಪೇಪರ್ ತೆಗೆದು ಕೊಂಡು ಹೋಗಲಾಗುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶೆಣೈ ಕಂಪೌಂಡ್ ನ ಮನೆಯ ಮೇಲೆ ಎರಗಿ ಮಗುಚಿ ಬಿದ್ದಿದೆ.
ಇಲ್ಲಿರುವ ಬಾಡಿಗೆ ಮನೆಯಲ್ಲಿ ಈಗ ಯಾರು ವಾಸ ಮಾಡುತ್ತಿಲ್ಲ. ಹಾಗಾಗಿ ದುರಂತ ತಪ್ಪಿದೆ.
Advertisement. Scroll to continue reading.


ಈ ಭಾಗದಲ್ಲಿ ಸೂಕ್ತ ದಾರಿ ದೀಪದ ವ್ಯವಸ್ಥೆ ಆಗಬೇಕು. ಸೂಕ್ತ ರೀಫ್ಲೆಕ್ಟರ್ ನಾಮ ಫಲಕ ಹೆಚ್ಚಿಸಬೇಕು. ನಗರ ಸಭೆ ಪೂರ್ಣ ಪ್ರಮಾಣದಲ್ಲಿ ದಾರಿ ದೀಪ ವ್ಯವಸ್ಥೆ ಮಾಡಬೇಕು.
ಈ ಹಿಂದೆಯೋ ಅಪಘಾತ ಸಂಭವಿಸಿದ್ದು, ಅನ್ಯ ರಾಜ್ಯಗಳ ವಾಹನ ಸವಾರರಿಗೆ ತಕ್ಷಣ ರೋಡ್ ಕಟ್ಟಿಂಗ್ ಗೊತ್ತಾಗುವುದಿಲ್ಲ.ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


































