ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವನನ್ನು ಸೆರೆ ಹಿಡಿದಿರುವ ಘಟನೆ ಚಾರಾದಲ್ಲಿ ನಡೆದಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾರೆ.
ಶಕೀಲ್ ಅಹಮ್ಮದ್ ಟಿ.ಕೆ ಬಂಧಿತ. ಈತನ ತಮ್ಮ ಅಕಿಲ್ ಅಹಮ್ಮದ್ ಪರಾರಿಯಾದವನು.

ಭಾನುವಾರ ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಚಾರಾ ನವೋದಯಾ ಶಾಲೆಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ 8:30 ಗಂಟೆಗೆ ಬೆಳಂಜೆ ಕಡೆಯಿಂದ ಒಂದು ಕಾರು ಅತೀವೇಗ ವಾಗಿ ಬರುತ್ತಿರುವುದನ್ನು ನೋಡಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ವಾಹನವನ್ನು ನಿಲ್ಲಿಸದೇ ಹೆಬ್ರಿ ಕಡೆಗೆ ಅತೀವೇಗವಾಗಿ ಚಲಾಯಿಸಿದ್ದಾನೆ.

ಇದರಿಂದ ಅನುಮಾನ ಬಂದು ವಾಹನವನ್ನು ಇಲಾಖಾ ವಾಹನದಲ್ಲಿ ಬೆನ್ನಟ್ಟಿದಾಗ ಅದರ ಚಾಲಕನು ಚಾರಾ ಸರ್ಕಲ್ ಬಳಿ ಬಂದು ಬ್ರಹ್ಮಾವರ ರಸ್ತೆಯಲ್ಲಿ ಹೋಗಿ ಮಂಡಾಡಿಜೆಡ್ಡು ಬಳಿ ಕೆರೆಬೆಟ್ಟು ಕಡೆಗೆ ಹೋಗುವ ರಸ್ತೆಗೆ ತಿರುಗಿಸಿ, ಕೆರೆಬೆಟ್ಟು ಗ್ರಾಮದ ಕರೆಬೆಟ್ಟು ಮಹಾಲಿಂಗ ದೇವಸ್ತಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಈ ವೇಳೆ ಶಕೀಲ್ ಅಹಮ್ಮದ್ ಟಿ.ಕೆ.ಯನ್ನು ಸೆರೆ ಹಿಡಿದಿದ್ದು, ಅಕಿಲ್ ಅಹಮ್ಮದ್ ಕಾಡಿಗೆ ಓಡಿ ತಪ್ಪಿಸಿಕೊಂಡಿದ್ದಾನೆ. ಕಾರನ್ನು ಪರಿಶೀಲಿಸಿದಾಗ, ಅದರ ಮುಂದಿನ ಗ್ಲಾಸ್ ಜಖಂ ಅಗಿದ್ದು, ಮುಂದಿನ ಎರಡು ಬದಿಯ ಚಕ್ರವು ಜಖಂ ಅಗಿದೆ. ಕಾರಿನ ಒಳಗಡೆ ಎರಡು ಜಾನುವಾರುಗಳು ಇದ್ದು, ಅದರಲ್ಲಿ ಒಂದು ಜಾನುವಾರು ಮೃತ ಪಟ್ಟಿತ್ತು.

ಬೇಳಂಜೆ ಗ್ರಾಮದ ಈಸರಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಎರಡು ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ನಾವು ತಂದಿದ್ದ ಕಾರಿನಲ್ಲಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಸಿ ಕೊಂಡು ವಧೆ ಮಾಡುವ ಬಗ್ಗೆ ಕಸಾಯಿಖಾನೆಗೆ ಮಾರಾಟ ಮಾಡಲು ಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































