ಪರ್ಕಳ : ಮಳೆಗಾಲ ಆರಂಭವಾಗುವ ಮೊದಲೇ ಈ ಬೆಟ್ಟುಗದ್ದೆಯಲ್ಲಿ ಸ್ವಲ್ಪಮಟ್ಟಿಗೆ ಕೆಳಕ್ಕೆ ಹೋದಂತೆ ಪ್ರದೇಶ ಕಂಡುಬಂದಿತ್ತು ನಂತರ ಈಗ ಬಾವಿಯಂತೆ ಕಂಡುಬಂದಿದೆ, ಬಾವಿಯ ತುಂಬಾ ಮಳೆನೀರು ತುಂಬಿಕೊಂಡಿದೆ ಸುತ್ತಲು ಗಿಡ ಗಂಟೆಗಳಿವೆ ಈ ಹಿಂದೆ ಈ ಪ್ರದೇಶದಲ್ಲಿ ಯಾವುದೇ ಬಾವಿ ಇರೋದು ಕಂಡುಬಂದಿಲ್ಲ. ನಾಲ್ಕೈದು ತಿಂಗಳ ಹಿಂದೆ. ಹಸುವನ್ನು ಮೇವುಗಾಗಿ ಕಟ್ಟುವಾಗ ಈ ಪ್ರದೇಶವು
ಬೆಟ್ಟುಗದ್ದೆಯ ಪ್ರದೇಶವಾಗಿದೆ, ಬೆಟ್ಟುಗದ್ದೆಯ ಮಧ್ಯದಲ್ಲಿ ಸ್ವಲ್ಪ ಭಾಗ ಕುಸಿದಂತೆ ಕಂಡುಬಂದಿತ್ತು ಅನ್ನುತ್ತಾರೆ ಪರ್ಕಳದ ಮಾಣೆಬೆಟ್ಟುವಿನ ರತ್ನಾಕರ್ ನಾಯಕ್. ಈ ಬೆಟ್ಟುಗದ್ದೆಯ ಪ್ರದೇಶ
ರತ್ನಾಕರ ನಾಯಕರ ಕುಟುಂಬಸ್ಥರ ಜಾಗಕ್ಕೆ ಸೇರಿದ ಜಾಗ ಎನ್ನಲಾಗಿದೆ.
ಒಟ್ಟಿನಲ್ಲಿ ಇದೇ ಪ್ರದೇಶದಲ್ಲಿ ಇಂತಹ ನಾಲ್ಕು ತಗ್ಗಿದಂತೆ ಪ್ರದೇಶವಿದೆ ಎಂದು ರತ್ನಾಕರ ನಾಯಕ್ ಹೇಳುತ್ತಾರೆ. ಆದರೆ ಈಗ ಮಳೆ ಬಂದಿರುವುದರಿಂದ ಗದ್ದೆಯಲ್ಲೆಲ್ಲಾ ನೀರಿದೆ. ಹಚ್ಚ ಹಸಿರು ಹುಲ್ಲು ಆಳೇತ್ತರಕ್ಕೆ ಬೆಳೆದಿದೆ ಈಗದ್ದೆಯನ್ನು ಉಳಿಮೆ ಮಾಡುವುದಿಲ್ಲ. ಆದುದರಿಂದ ಸದ್ಯಕ್ಕೆ ಒಂದು ಬಾವಿಯಂತಿರವ ಪ್ರದೇಶ ಇದೆ ಎಂದು ಸ್ಥಳ ಪರಿಶೀಲನೆ ಹೋದಾಗ ಪತ್ತೆಯಾಗಿದೆ.

ಈ ಬಾವಿಯಂತೆ ಕಂಡಿರುವ ಪ್ರದೇಶದ ಅಕ್ಕ ಪಕ್ಕದಲ್ಲಿ ನಾಲ್ಕು ನೇರವಾಗಿ ಇರುವಂತಹ ತಗ್ಗಿದ ಪ್ರದೇಶವಿದೆ ಎನ್ನುತ್ತಾರೆ ರತ್ನಾಕರ ನಾಯಕರು. ಹುಲ್ಲು ಮತ್ತೆ ಗಿಡ ಗಂಟೆಗಳು ಹೆಚ್ಚಿರುವುದರಿಂದ ಉಳಿದವುಗಳನ್ನು ಪತ್ತೆ ಮಾಡಲು ಆಗಲಿಲ್ಲ, ಈ ಮಳೆಗಾಲ ಮತ್ತು ಹವಾಮಾನ ಮತ್ತು ಪೂರಕವಾಗಿಲ್ಲ.
ಈ ಗದ್ದೆಯ ಪಕ್ಕದಲ್ಲಿ ಹಾಡಿ ಇದೆ. ನಾಗನಹುತ್ತಗಳು ಕಂಡುಬಂದಿದೆ. ಹಳೆಯ ಕಾಲದ ಶಿಲಾ ಪದರಗಳ ಕಲ್ಲುಗಳು ಕಂಡು ಬಂದಿದೆಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಬೆಟ್ಟು ಗದ್ದೆಯಲ್ಲಿ ಸೃಷ್ಟಿಯಾದ ಬಾವಿಯಂತೆ ಇರೊ ವಿಸ್ಮಯ ದಂತಿರುವ ಪ್ರದೇಶವನ್ನು ಪತ್ತೆ ಹಚ್ಚಿದ್ದಾರೆ.
ಈ ಸಂದರ್ಭದಲ್ಲಿ ರತ್ನಾಕರ್ ನಾಯಕರು ಜೊತೆಗಿದ್ದು ಸಹಕರಿಸಿದರು. ಈಗಾಗಲೇ ಹಿರಿಯ ಪ್ರಾಚ್ಯ ಸಂಶೋಧಕರಿಗೆ ಮಾಹಿತಿ ನೀಡಿದ್ದೇನೆ. ಮಳೆ ಕಡಿಮೆಯಾದ ನಂತರ ಈ ಪ್ರದೇಶಕ್ಕೆ ಭೇಟಿ ನೀಡುತ್ತೇವೆ ಎಂದಿದ್ದಾರೆ ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ



































