ಪರ್ಕಳ : ಇಲ್ಲಿನ ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ ಅವರ ಮನೆಯಲ್ಲಿ ಹಳೆ ಕಾಲದ ಮೂರು ತಲೆಮಾರು ಕಂಡ ಎತ್ತಿನ ಗಾಡಿಯೊಂದು ಕಾಣಸಿಗುತ್ತದೆ.
ಶತಮಾನದ ಹಿಂದೆ ಎತ್ತಿನಗಾಡಿ ಬೈಲೂರು ಕಾರ್ಕಳ, ಹೆಬ್ರಿ, ಉಡುಪಿ. ಮೊದಲಾದ ಕಡೆ ಸಂತೆ ನಡೆಯುವಲ್ಲಿ
ಅಕ್ಕಿ ಮೂಟೆ ದಿನಸಿ ಸಾಂಬಾರು ಪದಾರ್ಥ ಬೆಲ್ಲದ ಡಬ್ಬಿ, ಒಡೆದಕಟ್ಟಿಗೆ, ತೆಂಗಿನಕಾಯಿ, ಬೈ ಹುಲ್ಲು, ತರಕಾರಿ ಮೊದಲಾದವುಗಳನ್ನ ಮೂಟೆ ಮೂಟೆ ಎತ್ತಿನ ಬಂಡಿಯ ಮೂಲಕ ಸರಬರಾಜು ಮಾಡಿ, ಒಂದು ಕುಟುಂಬದ ಜೀವನಾಡಿಯಾದ ಈ ಎತ್ತಿನ ಗಾಡಿ ಶತಮಾನ ಪೂರೈಸಿದೆ. ಎಂದು ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ್ ತಿಳಿಸಿದ್ದಾರೆ.
ನಮ್ಮ ಅಜ್ಜ ದಿವಂಗತ ಕಿಟ್ಟ ಶೆಟ್ಟಿಗಾರ್ ಇದನ್ನು ಮೊದಲು ಉಪಯೋಗಿಸುತ್ತಿದ್ದರು. ನಂತರ ನನ್ನ ತಂದೆ ದಿವಂಗತ ಸಾಧು ಶೆಟ್ಟಿಗಾರ್ ಅವರು ಸ್ವಲ್ಪ ದುರಸ್ತಿ ಕಂಡು, ಎತ್ತಿನ ಗಾಡಿಯನ್ನು ಉಪಯೋಗಿಸುತ್ತಿದ್ದರು. ಮೂರು ತಲೆಮಾರುಗಳನ್ನು ಕಂಡ ಎತ್ತಿನಗಾಡಿ ಇದಾಗಿದೆ. ಇಂದಿಗೂ ತಮ್ಮ ಮನೆಯ ಮುಂದೆ ಅದನ್ನು ಉಳಿಸಿಕೊಂಡು ನನ್ನ ಪತಿದೇವರು ಉಪಗಿಸಿಕೊಂಡಿದ್ದ ಎತ್ತಿನ ಗಾಡಿ ಮನೆಯ ಮುಂದೆ ಇರುವುದು ನನಗೆ ಸಂತಸವಿದೆಯೆಂದು ದಿ. ಸಾಧು ಶೆಟ್ಟಿಗಾರರ ಪತ್ನಿ ಭವಾನಿ ಶೆಟ್ಟಿಗಾರ್ ನೆನಪನ್ನು ಹಂಚಿಕೊಂಡಿದ್ದಾರೆ.

ನನ್ನ ಮಕ್ಕಳು ಈಗ ಕಲಿತು ಉದ್ಯೋಗ ಅರಸಿ ಮಣಿಪಾಲ ಮತ್ತು ಉಡುಪಿಯತ್ತ ಮುಖ ಮಾಡಿದ್ದರೂ ಮಕ್ಕಳು ಇಟ್ಟು ನಮ್ಮ ಹಿರಿಯರು ಬಾಳಿ ಬದುಕು ಸಾಗಿಸಿದ ಜೀವನದ ಬಂಡಿಯೇ ಎನಿಸಿದ ಈ ಎತ್ತಿನ ಗಾಡಿಯನ್ನು ಪರ್ಕಳದಲ್ಲಿರುವ ಸರಸ್ವತಿ ನಗರದ ಮನೆಯ ಮುಂದಿರಿಸಿ, ಹಳೇಕಾಲದ ಸವಿನೆನಪನ್ನು ಮೆಲಕು ಹಾಕುತ್ತಾರೆ ಎಂದಿದ್ದಾರೆ.

ಒಟ್ಟಿನಲ್ಲಿ ಇಂದು ಸರಕು ಸಾಗಾಟದ ಲಾರಿ ಟೆಂಪೋ ಇತರೆ ವಾಹನಗಳ ವ್ಯಾಲಿಡಿಟಿ 15 ವರ್ಷರಿಂದ 25 ವರ್ಷ. ನಂತರ ಎಫ್. ಸಿ ಮಾಡಿ ಮುಂದೂಡಿ, ಒಂದು ಎರಡು ವರ್ಷ ಕಳೆದು ನಂತರ ಗುಜರಿಗೆ ಹೋಗುತ್ತದೆ. ಆದರೆ ಈ ಎತ್ತಿನ ಬಂಡಿ ಶತಮಾನ ಕಂಡಿರುವುದು. ಈಗಲು
ಉಪಯೋಗಿಸುವ ಸ್ಥಿತಿಯಲ್ಲಿದೆ. ಕಾಲ ಬದಲಾದಂತೆ ಅಕ್ಷರಸ್ಥ ನಾಗರಿಕರು ವಾಹನಗಳ ಮೂಲಕ ಸಾಗಾಟ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಎತ್ತಿನ ಗಾಡಿ ತುಳು ನಾಡಿನಲ್ಲಿ ಅವಸಾನದ ಅಂಚಿನಲ್ಲಿದೆ. ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು
ಅಭಿಪ್ರಾಯ ಪಟ್ಟಿದ್ದಾರೆ.
ಸ್ಥಳೀಯರಾದ ರಾಜೇಶ್ ಪ್ರಭು ಪರ್ಕಳ, ಗಣೇಶ್ ರಾಜ್ ಸರಳಬೆಟ್ಟು ಈ ಎತ್ತಿನ ಗಾಡಿ ಮನೆಯ ಎದುರೇ ಇರುವುದನ್ನು ಗಮನಿಸಿ, ಈ ಬಗ್ಗೆ ಮಾಹಿತಿ ಕಲೆ ಹಾಕಿ ಒದಗಿಸಿಕೊಟ್ಟಿದ್ದಾರೆ.



































