ವಾಷಿಂಗ್ಟನ್ : ಮಾಜಿ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಾಯಿಯಾಗಿದ್ದಾರೆ. ಮರಿಯಾ ಹಾಗೂ ಪ್ರಿಯಕರ ಅಲೆಕ್ಸಾಂಡರ್ ಗಿಲ್ಕ್ಸ್ ಅವರಿಗೆ ಗಂಡು ಮಗು ಜನಿಸಿದೆ
ಈ ಖುಷಿಯ ವಿಚಾರವನ್ನು ಮರಿಯಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ನವಜಾತ ಶಿಶುವಿನೊಂದಿಗೆ ದಂಪತಿ ಇರುವ ಫೋಟೋ ಹರಿಬಿಟ್ಟಿರುವ ಶರಪೋವಾ, “ನಮ್ಮ ಪುಟ್ಟ ಕುಟುಂಬದ ಅತ್ಯಂತ ಸುಂದರವಾದ, ಸವಾಲಿನ ಮತ್ತು ಲಾಭದಾಯಕ ಉಡುಗೊರೆ ಇದಾಗಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ, ಮಗುವಿಗೆ ‘ಥಿಯೋಡೋರ್’ ಎಂದು ನಾಮಕರಣ ಮಾಡಲಾಗಿದ್ದು, 1 ಜುಲೈ 2022 ರಂದು ಜನಿಸಿದ್ದಾನೆ ಎಂದು ರೋಮನ್ ಅಂಕಿಯಲ್ಲಿ ದಿನಾಂಕವನ್ನು ನಮೂದಿಸಿದ್ದಾರೆ.


ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಏಪ್ರಿಲ್‌ನಲ್ಲಿ ತನ್ನ 35ನೇ ಹುಟ್ಟುಹಬ್ಬದ ದಿನದಂದು ಮೊದಲ ಮಗುವಿನ ನಿರೀಕ್ಷಿಯಲ್ಲಿದ್ದೇನೆ ಎಂದು ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ರಷ್ಯಾ- ಬ್ರಿಟಿಷ್ ದಂಪತಿಗೆ ಇದು ಮೊದಲ ಮಗುವಾಗಿದೆ. 2 ವರ್ಷಗಳ ಡೇಟಿಂಗ್ ನಂತರ 2020 ರಲ್ಲಿ ಮರಿಯಾ ಶರಪೋವಾ ಮತ್ತು ಅಲೆಕ್ಸಾಂಡರ್ ಗಿಲ್ಕ್ಸ್ ನಿಶ್ಚಿತಾರ್ಥ ಮಾಡಿಕೊಂಡರು.

































