ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನಕ್ಕೆ ಬೆಂಗಳೂರಿನ ನಾರಾಯಣ ನೇತ್ರಾಲಯದ ವೈದ್ಯ ಡಾ. ರೋಹಿತ್ ಶೆಟ್ಟಿ ನೇತೃತ್ವದಲ್ಲಿ ಪ್ರಖ್ಯಾತ ಕಣ್ಣಿನ ವೈದ್ಯರುಗಳು ಆಗಮಿಸಿ ಅರ್ಚಕ ಅನಂತಪದ್ಮನಾಭ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವಿಶ್ವದ ನೂರು ವಿಶೇಷ ಕಣ್ಣಿನ ತಜ್ಞರಲ್ಲಿ ಓರ್ವರಾದ ಡಾ ರೋಹಿತ್ ಶೆಟ್ಟಿ ಇವರನ್ನು ಗೌರವಿಸಲಾಯಿತು.
Advertisement. Scroll to continue reading.


ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ಹೇಮಲತಾ ಶೆಟ್ಟಿ ಶಿರೂರು, ಭಜನಾ ಗುರುಗಳಾದ ರಾಘವೇಂದ್ರ ರಾವ್, ಆಡಳಿತ ಸಮಿತಿಯ ಸುರೇಶ್ ಸುಭಾನು, ಹಾಗೂ ನಾರಾಯಣ ನೇತ್ರಾಲಯದ ವಿಶೇಷ ತಜ್ಞ ವೈದ್ಯರಾದ ಡಾ. ಪೂಜಾ, ಡಾ. ಅನುಪಮಾ, ಡಾ ಸುಮಿತಾ, ಡಾ. ಮಂಜುನಾಥ್, ಡಾ.ಪೂರ್ಣಚಂದ್ರ, ಡಾ.ಅನಂತ್ ಭಂಡಾರಿ, ಡಾ ತಿರುಮಲೇಶ್, ಡಾ.ದಿವ್ಯರೇಷ್ಮಾ ಡಾ. ಚಿತ್ರಾ ಹಾಗೂ ವೈದ್ಯಕೀಯ ಸಹಾಯಕರಾದ ಗಿರಿಜಾ, ಚಿತ್ರಾ, ಸುಮಂಗಲಾ, ಶುಭಾ ಉಪಸ್ಥಿತರಿದ್ದರು.


































