ಉಡುಪಿ : ಬೊಬ್ಬರ್ಯ ಯುವ ಸೇವಾ ಸಮಿತಿ ಬಬ್ಬರ್ಯ ಕಟ್ಟೆ ಉಡುಪಿ ಇವರ ವತಿಯಿಂದ ಅಲೆವೂರು ಮುತ್ತ ಪೂಜಾರಿ ಅವರ ಮನೆಗೆ ಭೇಟಿ ಕೊಟ್ಟು ಸನ್ಮಾನಿಸಲಾಯಿತು. 82 ವರ್ಷದ ಅಲೆವೂರು ಮುತ್ತ ಪೂಜಾರಿ ಸುಮಾರು ಇವರು ಉಡುಪಿ ಬೊಬ್ಬರ್ಯ ಕಾಂತೇರಿ ಜುಮಾದಿ ಹಾಗೂ ಕಲ್ಕುಡ ಪರಿವಾರ ದೈವಸ್ಥಾನ ಉಡುಪಿ ಇಲ್ಲಿ ಕಾಂತೇರಿ ಜುಮಾದಿ ದೈವದ ದರ್ಶನ ಪಾತ್ರಿಯಾಗಿ ಸುಮಾರು 25 ವರ್ಷ ದೈವ ಚಾಕ್ರಿ ಮಾಡಿದ್ದಾರೆ. ಉಡುಪಿಯ ಪ್ರಸಿದ್ಧ ಗಡು ವಾಡು ದೈವಸ್ಥಾನ ಆದ ಉಡುಪಿಯ ನೆಲ್ಲಿಕಟ್ಟೆ ಜುಮಾದಿ ದೈವ ಸ್ಥಾನದ ಹಾಗೂ ಕಕ್ಕುಂಜೆ ಪಂಚ ಜುಮಾದಿ ದೈವಸ್ಥಾನ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಹಲವಾರು ದೈವಸ್ಥಾನಗಳಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸರಳ ವ್ಯಕ್ತಿತ್ವ ಸಮಾಜಸೇವಕರು ಮೂಡು ಅಲೆವೂರಿನ ಬಿಲ್ಲವ ಸಮುದಾಯದ ಗುರಿಕಾರರಾಗಿ ಸೇವೆ ಮಾಡುತ್ತಿದ್ದಾರೆ. ಸಮಾಜ ಸೇವಕರು ಹಲವಾರು ಕಷ್ಟದಲ್ಲಿ ಇರುವ ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ ಹಾಗೂ ಕಷ್ಟದಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ರಾಜ್ಯಮಟ್ಟದ ಕಬಡ್ಡಿ ಆಟಗಾರರು ತರಬೇತುದಾರ ಆಗಿದ್ದರು.
ಶ್ರೀಮಹೇಶ್ವರಿ ಮಂದಿರ ಕಂಬಲಕಟ್ಟ ಮೂಡು ಅಲೆವೂರು ಇದರ ಸ್ಥಾಪಕರು ಹಾಗೂ ಅರ್ಚಕರು ಹಾಗೂ ಆಡಳಿತ ಮುಖ್ಯಸ್ಥರು. ಸುಮಾರು 27 ವರ್ಷದಿಂದ ನಿರಂತರ ಸೇವೆ ಮಾಡುತ್ತಿದ್ದಾರೆ.
ಸನ್ಮಾನಿಸುವ ಸಂದರ್ಭದಲ್ಲಿ ಯುವ-ಉದ್ಯಮಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಹಾಗೂ ಬಬ್ಬರ್ಯ ಯುವ ಸೇವಾ ಸಮಿತಿಯ ಗೌರವ ಹಿತೈಷಿಗಳಾದ ಸಮಾಜಸೇವಕರಾದ ಯು. ಗಣೇಶ್ ದೇವಾಡಿಗ ಹಾಗೂ ಬೊಬ್ಬರ್ಯ ಯುವ ಸೇವಾ ಸಮಿತಿ ಗೌರವ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಇದರ ಸಂಸ್ಥಾಪಕ ಹಾಗೂ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ
ಹಾಗೂ ಸದಸ್ಯರಾದ ವಿಜಯ ಮಡಿವಾಳ ಹಾಗೂ ಸಮಿತಾ ಶೆಟ್ಟಿ ಉಪಸ್ಥಿತರಿದ್ದರು.



































