ಬೈಂದೂರು : ಅಂಬ್ಯುಲೆನ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಡಿಕ್ಕಿ ಹೊಡೆದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಗೇಟ್ ನಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಹೊನ್ನಾವರದ ನಿವಾಸಿಗಳಾದ ಲೋಕೇಶ್ ಮಾಧವ ನಾಯ್ಕ್, ಜ್ಯೋತಿ ಲೋಕೇಶ್ ನಾಯ್ಕ್, ಗಜಾನನ ಲಕ್ಷ್ಮಣ ನಾಯ್ಕ್ ಮೃತಪಟ್ಟವರು. ಮಂಜುನಾಥ್ ಗಂಭೀರವಾಗಿ ಗಾಯಗೊಂಡವರು.
ಲೋಕೇಶ್ ಮಾಧವ ನಾಯ್ಕ್ ರೋಗಿಯಾಗಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬಸ್ಥರು ಜೊತೆಯಲ್ಲಿದ್ದರು ಎನ್ನಲಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಾಟ ಮಾಡುತ್ತಿದ್ದ ಅಂಬ್ಯುಲೆನ್ಸ್ ವಾಹನ ಶಿರೂರು ಟೋಲ್ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದೆ.
ಈ ಸಂದರ್ಭ ಟೋಲ್ ಪ್ಲಾಝಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬ್ಯಾರಿಕೇಟ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ವೇಗವಾಗಿ ಬಂದ ಅಂಬ್ಯುಲೆನ್ಸ್ ಟೋಲ್ ಫ್ಲಾಝಾದಲ್ಲಿನ ಟೋಲ್ ಸಂಗ್ರಹಣಾ ಕೌಂಟರ್ ಗೆ ಢಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡವರನ್ನು ಟೋಲ್ ಸಿಬ್ಬಂದಿಗಳು ತಕ್ಷಣ ಟೋಲ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಕೊಂಡೊಯ್ದಿದ್ದಾರೆ. ಆದರೆ, ಮೂವರು ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ವರದಿ : ದಿನೇಶ್ ರಾಯಪ್ಪನಮಠ



































