ಕರೌಲಿ : ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ದಂಪತಿಗೆ ಮದುವೆಯಾಗಿ ಏಳು ವರ್ಷದ ಬಳಿಕ ಐದು ಮಕ್ಕಳಾಗಿವೆ. ಆದರೆ, ಇದರಲ್ಲಿ ಮೂರು ನವಜಾತ ಶಿಶುಗಳು ಸಾವನ್ನಪ್ಪಿವೆ. ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಸ್ಥಾನದ ಕರೌಲಿಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಕಳೆದ ಏಳು ವರ್ಷಗಳ ಹಿಂದೆ ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ ವಿವಾಹವಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಆದರೆ, ಕಳೆದ ಕೆಲ ತಿಂಗಳ ಹಿಂದೆ ರೇಷ್ಮಾ ಗರ್ಭ ಧರಿಸಿದ್ದರು. ಇದೀಗ, 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
Advertisement. Scroll to continue reading.

ಅಕಾಲಿಕ ಹೆರಿಗೆಯಿಂದಾಗಿ ಮೂವರು ಮಕ್ಕಳು ಅಸುನೀಗಿವೆ. ಉಳಿದ ಎರಡು ಮಕ್ಕಳ ಸ್ಥಿತಿ ಕೂಡ ಚಿಂತಾಜನಿಕವಾಗಿದೆ ಎನ್ನಲಾಗಿದೆ.


































