Connect with us

Hi, what are you looking for?

Diksoochi News

ಕರಾವಳಿ

ತೀರ ಹದಗೆಟ್ಟಿದೆ ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ರಸ್ತೆ; ಚರಂಡಿ ಇಲ್ಲ, ದಾರಿ ದೀಪವೂ ಇಲ್ಲ

2

ಕೆಮ್ರಾಲ್ : ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಹೊಸಕಾಡು ಭೋಜರಾವ್ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದೆ. ಮಣ್ಣಿನ ರಸ್ತೆಯಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುವುದರಿಂದ ವಾಹನಗಳಿಗೆ ಮಾತ್ರವಲ್ಲ ಜನರು ನಡೆದಾಡಲು ಸಂಕಷ್ಟ ಅನುಭವಿಸುವಂತಾಗಿದೆ.


500 ಮೀ ರಸ್ತೆಯುದ್ದಕ್ಕೂ ಹದಗೆಟ್ಟಿದೆ. ಈ ಭಾಗದ ಮಂದಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ದನದ ಫಾರ್ಮ್ ಹಾಲು, ಹಿಂಡಿ, ಗೊಬ್ಬರ ಸಾಗಾಟ ಎಲ್ಲದಕ್ಕೂ ಸಮಸ್ಯೆಯೇ. ದನದ ಸೆಗಣಿ ಶೇಖರಣೆಯಾಗಿ ಮಳೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ದನಗಳ್ಳರ ಹಾವಳಿ ಬೇರೆ.

ಬೀದಿ ದೀಪದ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿ ಮಂದಿಯ ಗೋಳು. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!