ವರದಿ : ಬಿ.ಎಸ್.ಆಚಾರ್ಯ
ಕೋಟ : ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ
ಹಂದಟ್ಟು- ದಾನಗುಂದು ಗೆಳೆಯರ ಬಳಗ ಸಭಾಭವನದಲ್ಲಿ ಆಸಾಡಿ ವಡ್ರ್ ಕಾರ್ಯಕ್ರಮ ನಡೆಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ರೈತಧ್ವನಿ ಸಂಘಟನೆಯ ಅಧ್ಯಕ್ಷ ಜಯರಾಮ ಶೆಟ್ಟಿ ಮಣೂರು ಮಾತಮಾಡಿ, ಆಷಾಢ ಮಾಸಕ್ಕೆ ವಿಶೇಷತೆ ಇದ್ದು, ಈ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳು ಆರೋಗ್ಯಕ್ಕೆ ಪೂರಕವಾಗಿದ್ದವು ಹಾಗೂ ಆಚರಣೆಯ ಹಿಂದೆ ನಂಬಿಕೆ ಇದೆ ಎಂದರು. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಕುಂದಗನ್ನಡ ಶಬ್ದ ಮರೆಯಾಗದಿರಲಿ ಎಂದರು. ಹಾಗೂ ಕುಂದಾಪ್ರ ಕನ್ನಡ ದಿನಾಚರಣೆ ನಮ್ಮ ಆಚಾರ- ವಿಚಾರ ಬೆಳೆಸುವಲ್ಲಿ ಸಹಾಯಕವಾಗಿದ್ದು, ಇದು ನಿತ್ಯ ನಿರಂತರವಾಗಿ ನಡೆಯಲಿ ಎಂದರು.
ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೀತಾನಂದ ಟ್ರಸ್ಟ್, ಮಣೂರು-ಪಡುಕರೆ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ ಕುಂದರ್ ತಿನಿಸು ಸ್ಪರ್ಧೆಗೆ ಚಾಲನೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ಕೋಟ ಅವರು ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು.
ಈ ಸಂದರ್ಭ ಬಹುಮುಖ ಪ್ರತಿಭೆ ವನಿತಾ ಉಪಾಧ್ಯ ಚಿತ್ರಪಾಡಿಯವರನ್ನು ಸಮ್ಮಾನಿಸಲಾಯಿತು.


ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಜಾನಕಿ ಹಂದೆ, ವಿಪ್ರ ಮಹಿಳಾ ಬಳಗ, ಸಾಲಿಗ್ರಾಮ ಅಧ್ಯಕ್ಷೆ ಜಾಹ್ನವಿ ಹೇರ್ಳೆ, ಮಹಿಳಾ ಮಂಡಲ ಕೋಟದ ಅಧ್ಯಕ್ಷೆ ಸುಶೀಲ ಸೋಮಶೇಖರ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ ಜೋಗಿ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಉಪಸ್ಥಿತರಿದ್ದರು.
ಈ ಸಂದರ್ಭ ಮಹಿಳೆಯರಿಗಾಗಿ ಗ್ರಾಮೀಣ ತಿನಿಸು ಮತ್ತು ಗ್ರಾಮೀಣ ಕ್ರೀಡೆಯ ಸ್ಪರ್ಧೆ ಜರಗಿತು.
ಮಹಿಳಾ ಮಂಡಲದ ಪದಾಧಿಕಾರಿಸುಜಾತ ಪಡುಕರೆ ಸ್ವಾಗತಿಸಿ, ಸಂಚಾಲಕಿ ಪುಷ್ಪ ಹಂದಟ್ಟು ಪ್ರಾಸ್ತಾವಿಕ ಮಾತನಾಡಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ, ಚೇತನಾ ಹಾಡಿಕರೆ ವಂದಿಸಿದರು.



































