ಉಡುಪಿ : ಮಣಿಪಾಲದ ಪೈ ಕುಟುಂಬದ ಹಿರಿಯ ಚೇತನ ಮೋಹನ್ ದಾಸ್ ಪೈ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಜು. 31ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಸಹೋದರರಾದ ಡಾ. ಟಿ.ರಾಮದಾಸ್ ಪೈ, ಟಿ. ಸತೀಶ್ ಯು. ಪೈ, ಟಿ.ನಾರಾಯಣ್ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್ ಪೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈಯವರನ್ನು ಅಗಲಿದ್ದಾರೆ.
ಆಧುನಿಕ ಮಣಿಪಾಲದ ನಿರ್ಮಾಣಕ್ಕೆ ಬಹಳಷ್ಟು ಶ್ರಮಿಸಿದ್ದ ಇವರು, ಮಣಿಪಾಲದ ವಿವಿಧ ಸಂಸ್ಥೆಗಳ ಪಾಲುದಾರರೂ ಕೂಡ ಆಗಿದ್ದರು. ಡಾ ಟಿ ಎಂ ಎ ಪೈ ಫೌಂಡೇಶನ್ ಹಾಗೂ ಎಂಜಿಎಂ ಕಾಲೇಜ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು.
Advertisement. Scroll to continue reading.

ಎಂಜಿಎಂ ಕಾಲೇಜಿನಲ್ಲಿ ನಾಳೆ(ಆಗಸ್ಟ್ 1) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
In this article:Diksoochi news, diksoochi Tv, diksoochi udupi, manipal, Mohan Das Pai
Click to comment

































