ಮಂಗಳೂರು : ಸಾಂಪ್ರದಾಯಿಕ ಇಂಧನದ ಕೊರತೆಯನ್ನು ಶಾಶ್ವತವಾಗಿ ನೀಗಿಸಿ ಗ್ರಾಮ ಹಾಗೂ ದೇಶದ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪರ್ಯಾಯ ಸುಸ್ಥಿರ ಇಂಧನವಾದ ಸೌರ ಶಕ್ತಿಯನ್ನು ಎಲ್ಲರೂ ಬಳಸಿಕೊಂಡಾಗ ಮಾತ್ರ ಭವ್ಯ ಭವಿಷ್ಯತ್ನ್ನು ರೂಪಿಸಿಕೊಳ್ಳಬಹುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಜನಶಿಕ್ಷಣ ಟ್ರಸ್ಟ್ ಸೆಲ್ಕೋ ಸೋಲಾರ್ ಲೈಟ್ ಪ್ರೈಲಿ, ಉಳ್ಳಾಲ ತಾಲೂಕು ಪಂಚಾಯತ್ ಹಾಗೂ ಗ್ರಾಪಂಗಳ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಂಪೂರ್ಣ ಸ್ವಚ್ಛ – ಸಂಪೂರ್ಣ ಸೋಲಾರ್ ಗ್ರಾಮ ಸಂವಾದ ಸಂಕಲ್ಪ – 2022ಕ್ಕೆ ಸೋಲಾರ್ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಸೆಲ್ಕೊ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಸೌರಶಕ್ತಿ ಬಳಸಿಕೊಂಡು ಪ್ರತಿಯೊಬ್ಬರೂ ಇರುನೆಲೆಯಲ್ಲೇ ಪರಿಸರ ಸ್ನೇಹಿ, ಸುಸ್ಥಿರವಾದ ಜೀವನೋಪಾಯ ಕಂಡುಕೊಂಡಾಗ ಮಾತ್ರ ನಿರುದ್ಯೋಗ, ವಲಸೆ, ತಾಪಮಾನ ವೈಪರೀತ್ಯದಂತ ಸಮಸ್ಯೆಗಳನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದರು.
ಉದ್ಯಮಿ ರಮೇಶ್ ಶೇಣವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಶೀನ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.


ಉಳ್ಳಾಲ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನಾಗರಾಜ್, ಕೆನರಾ ಬ್ಯಾಂಕ್ ಮುಡಿಪು ಶಾಖೆಯ ವ್ಯವಸ್ಥಾಪಕ ಪುರಂದರ ಬಿ., ಪಂಚಾಯತ್ ಅಧ್ಯಕ್ಷ ಗಣೇಶ್ ನಾಯಕ್, ಅಗ್ನೆಸ್ ಡಿಸೋಜ, ಲತಾ ಹರಿಪ್ರಸಾದ್, ಅಧಿಕಾರಿಗಳಾದ ಶ್ರೀಕಾಂತ್, ಕೇಶವ, ಕೃಷ್ಣಕುಮಾರ್, ಅಕ್ಷಿತಾ, ಆಯಿಷಾ, ಬಾನು, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಸೆಲ್ಕೋದ ಪ್ರಾದೇಶಿಕ ವ್ಯವಸ್ಥಾಪಕರಾದ ಶೇಖರ್ ಶೆಟ್ಟಿ ವಂದಿಸಿದರು.ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಸೆಲ್ಕೋ ವ್ಯವಸ್ಥಾಪಕ ರವೀನಾ ಬಗೇರ ಸಹಕರಿಸಿದರು.


































