Connect with us

Hi, what are you looking for?

Diksoochi News

ಕರಾವಳಿ

ಬೋರ್ಡ್ ಹೈಸ್ಕೂಲ್ ಕುಂದಾಪುರ :
ಎನ್.ಎಸ್.ಎಸ್. ಘಟಕದಲ್ಲಿ ಹರ್ ಘರ್ ತಿರಂಗಾ ಮಾಹಿತಿ ಕಾರ್ಯಾಗಾರ

2

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಸುವುದು ನಮ್ಮ ಆತ್ಮ ಗೌರವದ ಸಂಕೇತ ಈ ಕಾರ‍್ಯಕ್ರಮದ ಮೂಲ ಮುಖ್ಯ ಉದ್ದೇಶ ರಾಷ್ಟ್ರ ಧ್ವಜದ ತ್ರಿವರ್ಣದೊಂದಿಗೆ ನಾಗರಿಕರ ವೈಯಕ್ತಿಕ ಸಂಬಂಧವನ್ನು ಸ್ಥಾಪಿಸುವುದು ದೇಶದ ಏಕತೆ ಸಾರಲು ದೇಶ ಭಕ್ತಿ ಮತ್ತು ಬಾವನಾತ್ಮಕತೆಯನ್ನು ಬೆಸೆಯುವುದರೊಂದಿಗೆ ರಾಷ್ಟ್ರ ನಿರ್ಮಾಣಕ್ಕಾಗಿನ ಬದ್ಧತೆಯನ್ನು ಸಾಕಾರಗೊಳಿಸುವುದಾಗಿದೆ. ದೇಶದ ಪ್ರತಿಯೊಂದು ಮನೆ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಾಡಿ ಈ ಅಭಿಯಾನ ಯಶಸ್ವಿಗೊಳಿಸುವಲ್ಲಿ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದು ಉಡುಪಿ ಜಿಲ್ಲಾ ಭಾರತ್ ಸೇವಾದಳ ಘಟಕದ ಜಿಲ್ಲಾ ಸಂಘಟಕದ ಪಕೀರ್ ಗೌಡ ಹೇಳಿದರು.

ಸರಕಾರಿ ಪದವಿ ಪೂರ್ವ ಕಾಲೇಜು ಬೋರ್ಡಹೈಸ್ಕೂಲ್ ಕುಂದಾಪುರ ಇಲ್ಲಿನ ಪ್ರೌಢಶಾಲಾ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ (ಎನ್. ಎಸ್.ಎಸ್.) ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ‍್ಯಕ್ರಮ ಮತ್ತು ಹರ್ ಘರ್ ತಿರಂಗಾ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement. Scroll to continue reading.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕಛೇರಿಯ ಸಮನ್ವಯಾಧಿಕಾರಿಗಳಾದ ಅಶೋಕ್ ನಾಯ್ಕ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದೊಂದಿಗೆ ವ್ಯಕ್ತಿ ವಿಕಸನ ಮತ್ತು ಶಿಕ್ಷಣದೊಂದಿಗೆ ಸೇವೆ ಎನ್ನುವ ಮೂಲ ಮುಖ್ಯ ಧ್ಯೇಯದೊಂದಿಗೆ ಸಮಾಜ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಬೆಸೆಯುವಾ ರಾಷ್ಟ್ರೀಯ ಸೇವಾ ಯೋಜನೆಯ (ಎನ್. ಎಸ್.ಎಸ್.) ಘಟಕಗಳು ಪ್ರತಿಯೊಂದು ಶಾಲೆಗಳನ್ನು ತಲುಪುವಂತಾಗಬೇಕು ಎಂದರು.


ನಿರಂತರ ಎರಡು ವರ್ಷಗಳ ಕಾಲ ಸ್ವಯಂ ಸೇವಕರಾಗಿ ದುಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಹಾಗೆ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮಹಿತಿ ಕೈಪಿಡಿ ಮತ್ತು ಬ್ಯಾಡ್ಜ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನೆ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಆದ ಉದಯ ಮಡಿವಾಳ ಎಂ ಇವರು ಘಟಕದ ಹಿಂದಿನ ವರ್ಷದ ಕಾರ್ಯಕ್ರಮಗಳ ವರದಿಯೊಂದಿಗೆ ಪ್ರಾಸ್ತಾವಿಕವಾದ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ ಮಾತನಾಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್. ಎಸ್.ಎಸ್ ಕೋಶ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸೇವಾ ಯೋಜನೆಯ (ಎನ್. ಎಸ್.ಎಸ್.) ಘಟಕಗಳು ಪ್ರೌಢಶಾಲಾ ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಸಹಕಾರಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

Advertisement. Scroll to continue reading.


ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸತೀಶ್ ಕುಮಾರ್ ವಹಿಸಿದ್ದರು.

ಸಭೆಯಲ್ಲಿ ಮುಖ್ಯ ಆತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ ಜಿ ಎನ್ ಎಸ್ ಎಸ್ ಘಟಕದ ನಾಯಕಿ ಕುಮಾರಿ ಭೂಮಿಕಾ ಉಪಸ್ಥಿತರಿದ್ದರು. ಸ್ವಯಂ ಸೇವಕಿ ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿ, ಸುಜಲ್ ಅತಿಥಿಗಳನ್ನು ಸ್ವಾಗತಿಸಿದರು, ಚೈತ್ರ ವಂದಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!