ಬಿಲ್ಲಾಡಿ ಗ್ರಾಪಂನಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
Published
0
ಬ್ರಹ್ಮಾವರ : 10 ನೇ ಬಿಲ್ಲಾಡಿ ಗ್ರಾಮಪಂಚಾಯತ್ ನೇತೃತ್ವದಲ್ಲಿ ಬಿಲ್ಲಾಡಿ ಗ್ರಾಮ ಪಂಚಾಯತ್ ನ ಪ್ರತೀ ಮನೆಗೆ ಪಂಚಾಯತ್‌ನಿಂದ ರಾಷ್ಟ್ರ ಧ್ವಜ ನೀಡುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ದೇಶಕ್ಕೆ ಅದೆಷ್ಟೋ ಮಹಾತ್ಮರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಲ್ಲಾಡಿ ಗ್ರಾಮದ ಪ್ರತೀ ಮನೆಯಲ್ಲೂ ಆಗಸ್ಟ್ 13 ರಿಂದ ಆಗಸ್ಟ್ 15 ರ ತನಕ ರಾಷ್ಟ್ರ ದ್ವಜ ಹಾರಿಸುವುದರ ಮೂಲಕ ಗ್ರಾಮದಲ್ಲಿ ಉತ್ಸವವಾಗಿ ಆಚರಿಸೋಣ ಎಂದರು. ಬಿಲ್ಲಾಡಿ ಗ್ರಾಮಪಂಚಾಯತ್ ಉಪಾದ್ಯಕ್ಷ ಪ್ರಕಾಶ್ ಶೆಟ್ಟಿ ನೈಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯತ್ ಸದಸ್ಯ ರವಿ ಆಚಾರ್ ಅರಾಡಿ, ಶಕುಂತಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅದ್ಯಕ್ಷರಾದ ಮಮತಾ ಎಸ್ ಶೆಟ್ಟಿ, ಕೆ.ಎಂ.ಎಫ್ ವಿಸ್ತರಣಾ ಅಧಿಕಾರಿ ಪ್ರತಿಭಾ, ಕಾರ್ಯದರ್ಶಿ ಮೋಹಿನಿ, ಎಲ್ಲಾ ನಿರ್ದೇಶಕರು ,ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಊರಿನ ಯುವಕರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.