ಕಾಪು: ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಚಂದ್ರ ನಗರ ಕಾಪು,ಇಲ್ಲಿನ ವಿದ್ಯಾರ್ಥಿಗಳಿಂದ ಶುಕ್ರವಾರ “ಹರ್ ಘರ್ ತಿರಂಗ’ ಅಭಿಯಾನ ನಡೆಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಘೋಷಣೆಯೊಂದಿಗೆ
ಶಾಲೆಯ ಅಧ್ಯಕ್ಷರಾದ ಶಂಶುದ್ದೀನ್ ಯೂಸುಫ್ ಹಾಗು ವ್ಯವಸ್ಥಾಪಕರಾದ ಶೆಹನಾಝ್ ಚಾಲನೆ ನೀಡಿದರು.

ಚಂದ್ರ ನಗರದಿಂದ ಆರಂಭಗೊಂಡ ವಿದ್ಯಾರ್ಥಿಗಳ ಜಾಥ ಪಕೀರ್ನ ಕಟ್ಟೆ,ಬೆಳಪು ಮಾರ್ಗವಾಗಿ ಉಚ್ಚಿಲದಲ್ಲಿ ಕೊನೆಗೊಂಡಿತು.ರಾಷ್ಟ್ರ ಧ್ವಜ ಹಾರಿಸಿಕೊಂಡು ಬಂದ ವಿದ್ಯಾರ್ಥಿಗಳೊಂದಿಗೆ ಶಾಲೆಯ ಅಧ್ಯಾಪಕರು,ಸಿಬ್ಬಂದಿಗಳು ಹಾಗು ಸಾರ್ವಜನಿಕರು ಜೊತೆಗೂಡಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳಿಗೆ ಉಚ್ಚಿಲದಲ್ಲಿ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗು ತ್ರೀ ಸ್ಟಾರ್ ಲಕ್ಕೀ ಸ್ಕೀಮ್ ಸಹಿತ ಅನೇಕರು ತಂಪು ಪಾನೀಯ ಹಾಗು ಸಿಹಿ ತಿಂಡಿ ವಿತರಿಸಿದರು.


ಈ ಸಂದರ್ಭದಲ್ಲಿ ಶಾಲೆಯ ಅಡ್ಮಿನಿಸ್ಟ್ರೇಟರ್ ಆ್ಯಂಡ್ ಅಕಾಡೆಮಿ ಡೈರೆಕ್ಟರ್ ನವಾಬ್ ಹಸನ್ ಗುತ್ತೇದರ್,ಪ್ರಿನ್ಸಿಪಲ್ ಅಕ್ಬರ್ ಅಲಿ, ಸಂಯೋಜಕರಾದ ಅರುಣಾ ಮೇಡಂ, ಸಿಬ್ಬಂದಿ ಗಳಾದ ಶೇಖುಞಿ ಚೆರಿಮೋನ್,ರಪೀಕ್ ಬೆಳಪು, ಎಸ್ಡಿಪಿಐ ಮುಖಂಡರಾದ ಶರೀಫ್ 313 ,ಮಜೀದ್ ಪೊಲ್ಯ,ಅಬ್ದುಲ್ ರಝಾಕ್ ವೈ.ಎಸ್.ಇಬ್ರಾಹಿಂ ಅರ್ಶ್, ತ್ರೀ ಸ್ಟಾರ್ ಲಕ್ಕೀ ಸ್ಕೀಮ್ ಸಂಸ್ಥೆಯ ಅಬ್ದುಲ್ ರಝಾಕ್ ಕರೀಂ,ಶೇಖ್ ಫಝಲ್ ಇನ್ನಿತರರು ಉಪಸ್ಥಿತಿತರಿದ್ದರು.


































