Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಚಿವ ಸುನಿಲ್ ಕುಮಾರ್ ಶಂಕು ಸ್ಥಾಪನೆ

1

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಶಂಕು ಸ್ಥಾಪನೆಯನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ನೆರವೇರಿಸಿದರು.

ಬಳಿಕ‌ ಅವರು ಮಾತನಾಡಿ, ಬದುಕು ವೇಗವಾಗಿ ಸಾಗುವ ಕಾಲ. ತ್ಯಾಜ ವಿಲೇವಾರಿ ಸಮಸ್ಯೆ ಪಟ್ಟಣಗಳಲ್ಲಿ ಅಲ್ಲದೆ ಹಳ್ಳಿಯಲ್ಲೂ ತ್ಯಾಜ ಸಂಗ್ರಹವಾಗಿ ಕಸ ವಿಲೇವಾರಿ ಮಾಡುವುದು ಇದೀಗ ಸವಾಲಾಗಿ ಪರಿಣಮಿಸಿದೆ. ಅಭಿವೃದ್ದಿಯಾಗಲೇಬೇಕು. ಜೊತೆಗೆ ಉತ್ಪತ್ತಿಯಾದ ಒಣ ಕಸ ಹಸಿ ಕಸ ವನ್ನು ವಿಲೇವಾರಿ ಮಾಡುವ ಸಲುವಾಗಿ 5 ವರ್ಷಗಳ ಹಿಂದೆ ಎಸ್. ಎಲ್. ಆರ್. ಎಂ. ಘಟಕ ಇಲ್ಲಿ ಸ್ಥಾಪನೆಯಾಯಿತು.

Advertisement. Scroll to continue reading.

ಪ್ಲಾಸ್ಟಿಕ್ ನಿಷೇಧ ಕಾನೂನು ಬಂದರೂ ಸಮಾಜದಲ್ಲಿ ಪ್ಲಾಸ್ಟಿಕ್ ತ್ಯಾಜ ಹೆಚ್ಚಾಗಿದ್ದು, ಎಂ. ಆರ್. ಎಫ್ ಕೇಂದ್ರದ ಮೂಲಕ ತ್ಯಾಜ್ಯವು ಸಂಪನ್ಮೂಲವಾಗಿ ಪರಿವರ್ತನೆಗೊಳ್ಳಲಿದೆ. ಜಿಲ್ಲಾ ಪಂಚಾಯತ್ ಅನುಷ್ಠಾನ ಮಾಡುತ್ತಿರುವ ಸ್ವಚ್ಛ ಭಾರತ್ ಕಾರ್ಯಕ್ರಮದಡಿಯಲ್ಲಿ ಕೆಲವೊಂದು ಕಡೆಗಳಲ್ಲಿ ಕೇಂದ್ರವು ನಿರ್ಮಾಣಗೊಳ್ಳುತ್ತಿದ್ದು ಸ್ವರ್ಣ ಕಾರ್ಕಳದ ಕನಸು ನನಸಾಗುತ್ತಿದೆ ಎಂದರು.

ಹೆಬ್ರಿ ನಾಗರಾಜ್ ಜೋಯಿಸ್ ಅವರು ಪೂಜಾ ವಿಧಿ ವಿಧಾನಗಳನ್ನು ನಡೆಸಿ ಶುಭ ಹಾರೈಸಿದರು.

ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಶ್ರೀನಿವಾಸ್ ರವರು ಘಟಕದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್. ಪ್ರಸನ್ನ ರವರು ಮಾತನಾಡಿ ಘಟಕದ ಉದ್ದೇಶದ ಬಗ್ಗೆ ತಿಳಿಸಿದರು.

ಹೆಬ್ರಿ ಎಸ್. ಎಲ್. ಎಂ. ಘಟಕದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ 7 ಮಂದಿ ಸ್ವಚ್ಛತಾ ಶಿಬ್ಬಂದಿಯನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್. ಕೆ. ಜಿ. ಸ್ವಾಗತಿಸಿದರು. ಪಿ. ಡಿ. ಓ. ಸದಾಶಿವ ಸೇರ್ವೆಗಾರ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಯೋಜನಾಧಿಕಾರಿ ಮಹೇಶ್ ವಂದಿಸಿದರು.

ಗ್ರಾಮಪಂಚಾಯತಿಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಊರಿನ ಗಣ್ಯರು ಹಾಜರಿದ್ದರು.

Advertisement. Scroll to continue reading.

ಹೆಬ್ರಿ ಪೊಲೀಸ್ ಕ್ವಾಟರ್ಸ್ ಬಳಿ ಇರುವ ಘಟಕವು
ರೂ. 93ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಹೆಬ್ರಿ ಎಸ್. ಎಲ್. ಆರ್. ಎಂ ಘಟಕದ ಆವರಣದಲ್ಲಿ ನೂತನ ಸಮಗ್ರ ಘನ ತ್ಯಾಜ ನಿರ್ವಹಣಾ ಕೇಂದ್ರವು (ಎಂ. ಆರ್. ಎಫ್) ಅಧಿಕೃತವಾಗಿ ನಿರ್ಮಾಣಗೊಳ್ಳಲಿದೆ. 4 ತಾಲೂಕಿನ 15 ಗ್ರಾಮ ಪಂಚಾಯತ್ ಗೆ ಒಳಪಟ್ಟ ಘಟಕವಾಗಿದ್ದು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜಗಳು ಎಸ್. ಎಲ್. ಆರ್. ಎಂ ಘಟಕದಿಂದ ಟನ್ ಗಟ್ಟಲೆ ಬರಲಿದೆ. ಇಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜಗಳು ಆಧುನಿಕ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗದೆ ಅತ್ಯಂತ ವೈಜ್ಞಾನಿಕವಾಗಿ ಸಂಸ್ಕರಿಸಿದ ಬಳಿಕ ಸಂಪನ್ಮೂಲವಾಗಿ ಪರಿವರ್ತನೆಗೊಂಡು ವಿಲೇವಾರಿ ಮಾಡುವ ಉದ್ದೇಶ ಹೊಂದಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!