ದಾವಣಗೆರೆ : ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಮಲಬಾಯಿ(55) ಮೃತ ಮಹಿಳೆ.
10 ಜನ ಮಹಿಳೆಯರು ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆಯಲು ಹೋಗಿದ್ದರು. ಕಳೆ ತೆಗೆಯುವಾಗ ಕಮಲಾಬಾಯಿ ಸ್ವಲ್ಪ ಹಿಂದೆ ಉಳಿದಿದ್ದಾರೆ. ಈ ವೇಳೆ ಚಿರತೆ ಅವರ ಮೇಲೆ ದಾಳಿ ಮಾಡಿದೆ.
ಅವರ ಕುತ್ತಿಗೆಗೆ ಬಾಯಿ ಹಾಕಿ 100 ಅಡಿ ದೂರ ಎಳೆದುಕೊಂಡು ಹೋಗಿದೆ.
Advertisement. Scroll to continue reading.

ಇದನ್ನು ನೋಡಿದ ಇತರ ಮಹಿಳೆಯರು ಕಿರುಚಾಡಿದ್ದಾರೆ.
ನಂತರ ಚಿರತೆ ಕಮಲಾಬಾಯಿಯನ್ನು ಬಿಟ್ಟು ಓಡಿ ಹೋಗಿದೆ. ತೀವ್ರ ರಕ್ತಸ್ರಾವದಿಂದಾಗಿ ಅವರು ಅಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Advertisement. Scroll to continue reading.

In this article:davangere, Diksoochi news, diksoochi Tv, diksoochi udupi, leopard attack
Click to comment

































