ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸರಕಾರಿ ವ್ಯವಸ್ಥೆಯೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯಿಂದ ದೇಶಕ್ಕೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ಹೇಳಿದರು.

ಅವರು ಬುಧವಾರ ಬಾರಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ, ೨೦೦೪ರಲ್ಲಿ ಬಂದ ಸುನಾಮಿಯ ಬಳಿಕ ದೇಶವ್ಯಾಪಿಯಾಗಿ ಸಂಭವಿಸುವ ನಾನಾ ವಿಪತ್ತು ನಿರ್ವಣೆಗೆ ಸರಕಾರ ದೇಶ, ರಾಜ್ಯ, ಜಿಲ್ಲೆ ,ತಾಲೂಕು ಮಟ್ಟದಲ್ಲಿ ಕಾರ್ಯ ಆಚರಿಸುತ್ತದೆ ಇದೀಗ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ಮಟ್ಟದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುವ ಈ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್ ಮಾತನಾಡಿ, ವಿಪತ್ತು ಮತ್ತು ವಿಕೋಪಗಳು ಬರುವುದೇ ಆಕಸ್ಮಿಕ , ಅದು ಎಲ್ಲಿ ಹೇಗೆ ಯಾಕೆ ಬರುತ್ತದೆ ಎಂದು ಹೇಳಲು ಅಸಾದ್ಯ . ಪ್ರಾಕೃತಿಕ ವಿಕೋಪ ಅಗ್ನಿ, ಅನಾಹುತ , ಆಕಸ್ಮಿಕ ನಡೆಯುವ ವಿಪತ್ತು ಗಳನ್ನು ನಿಯಂತ್ರಿಸುವ ಕುರಿತು ತರಬೇತಿ ಪಡೆದಲ್ಲಿ ಅದೆಷ್ಟೊ ಜೀವವನ್ನು ಉಳಿಸಲು ಸಾದ್ಯ ಎಂದರು.

ಉಡುಪಿ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಸತೀಶ್ ಹಲವಾರು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು.
ಜನ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಚ್ಯುತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ , ಜಿಲ್ಲಾ ಹಿರೀಯ ನಿರ್ದೇಶಕ ಶಿವರಾಯ ಪ್ರಭು , ಬಾರಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ , ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಪ್ರತಾಪ್ ಶೆಟ್ಟಿ , ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್ ತಾಲೂಕು ಜನಜಾಗೃತಿ ವೇದಿಕೆಯ ಹರೀಶ್ ಶೆಟ್ಟಿ ಚೇರ್ಕಾಡಿ, ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ , ಕೂಡ್ಲಿ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ರೀನಿವಾಸ ಉಡುಪ ಇನ್ನಿತರು ಉಪಸ್ಥಿತರಿದ್ದರು.
ಸಂಯೋಕರು ಸೇರಿದಂತೆ ೭೭ ಮಂದಿ ವಿಪತ್ತು ನಿರ್ವಹಣೆ ಕುರಿತು ಮಾಹಿತಿ ಪಡೆದರು.



































