ಉಡುಪಿ : ಜಿಲ್ಲೆಯ ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು -1 ಹುದ್ದೆ (ಪ್ರವರ್ಗ-2(ಎ)-ಗ್ರಾಮೀಣ ಅಭ್ಯರ್ಥಿ) ಹಾಗೂ ಕುಂದಾಪುರ ತಾಲೂಕಿನ ಗುಲ್ವಾಡಿ (ಸಾಮಾನ್ಯ ಅಭ್ಯರ್ಥಿ-ಮಹಿಳೆ) ಮತ್ತು ಯಡಮೊಗೆ ಗ್ರಾಮ ಪಂಚಾಯತ್‌ನ (ಪ್ರವರ್ಗ-2(ಬಿ)-ಗ್ರಾಮೀಣ ಅಭ್ಯರ್ಥಿ) ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು-ತಲಾ 1 ಹುದ್ದೆ ಸೇರಿದಂತೆ ಒಟ್ಟು 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement. Scroll to continue reading.

In this article:Diksoochi news, diksoochi Tv, Grama panchayath, librarian, yedamoge
Click to comment

































