ಈ ವರ್ಷದ ಕೊನೆಯ ಚಂದ್ರಗ್ರಹಣವು ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸಲಿದೆ. ಅಕ್ಟೋಬರ್ 28 ಶನಿವಾರ ರಾತ್ರಿ 1:04ಕ್ಕೆಗ್ರಹಣ ಆರಂಭವಾಗಲಿದ್ದು, 29ರ ಮಧ್ಯರಾತ್ರಿ 2:24 ನಿಮಿಷಕ್ಕೆ ಮುಕ್ತಾಯವಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಣದ ಸಮಯದಲ್ಲಿ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಸಮಯದಲ್ಲಿ ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಇದರಿಂದ ಗುರು ಮತ್ತು ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗವನ್ನು ರೂಪಿಸುತ್ತಾರೆ.
ಚಂದ್ರಗ್ರಹಣ,ಸೂರ್ಯಗ್ರಹಷ ನಡೆದಾಗ ವ್ಯಕ್ತಿಗಳ ರಾಶಿಯ ಮೇಲೆ ಕೆಲ ಶುಭ ಮತ್ತು ಅಶುಭ ಪರಿಣಾಮ ಬೀರಲಿದೆ ಎಂಬ ನಂಬಿಕೆ ಇದೆ.

ಯಾವ ರಾಶಿಗೆ ಒಲಿಯಲಿದೆ ಶುಭಫಲ :

ಮಿಥುನ ರಾಶಿಯವರಿಗೆ ಬಹಳ ಉತ್ತಮಫಲಗಳು ಗೋಚರವಾಗಲಿವೆ. ಅನಾರೋಗ್ಯದ ವಿಚಾರಗಳಲ್ಲಿ ಶುಭಫಲ. ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರ ಸ್ಥಿತಿ ಸುಧಾರಿಸಲಿದೆ. ವೃತ್ತಿ ಸಂಬಂಧಿತ ಅನೇಕ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ. ನೀವು ಮಾನಸಿಕ ಒತ್ತಡದಿಂದ ಪರಿಹಾರವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ ಜೊತೆಗೆ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ.

ಸಿಂಹ ರಾಶಿಯವರ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಸಿಂಹ ರಾಶಿಯವರಿಗೆ, ಉನ್ನತಿ ಸಾಧ್ಯ.
ಭಾವನೆಗಳು, ಭಯಗಳು ಅಥವಾ ಅತೃಪ್ತ ಆಸೆಗಳನ್ನು ಎದುರಿಸಲು ಸಿಂಹ ರಾಶಿಯವರಿಗೆ ಶಕ್ತಿ ಬರಲಿದೆ. ಚಂದ್ರಗ್ರಹಣದ ಈ ಸುದಿನ ಅವರ ಗುರಿಗಳು, ಸಂಬಂಧಗಳು ಮತ್ತು ಆಂತರಿಕ ಹೋರಾಟಗಳನ್ನು ಮರು ಮೌಲ್ಯಮಾಪನ ಮಾಡಲು ಅವಕಾಶ ನೀಡುತ್ತದೆ.


ಚಂದ್ರಗ್ರಹಣವು ತುಲಾ ರಾಶಿಯವರಿಗೆ ಸಾಮಾಜಿಕ ಮತ್ತು ವೃತ್ತಿಪರ ಯಶಸ್ಸನ್ನು ನೀಡಲಿದೆ.
ವೃತ್ತಿಪರ ವಯಲಗಳಲ್ಲೂ ಬೆಳವಣಿಗೆ ಹೊಂದಲು ಸಮಯ ಕೂಡಿ ಬರಲಿದೆ. ಈ ರಾಶಿಯವರ ಕೆಲ ಈಡೇರದ ಆಸೆಗಳು ಈಡೇರುತ್ತವೆ. ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ವೃಶ್ಚಿಕ ರಾಶಿಯ ಜನರು ಈ ಚಂದ್ರಗ್ರಹಣದಿಂದ ಅನೇಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಗ್ರಹಣದಿಂದ ನಿಮಗೆ ಶ್ರೀಮಂತಿಕೆ ಹೆಚ್ಚಾಗುವ ಸಾಧ್ಯತೆ ಇದೆ. ನಿಮಗೆ ಹಠಾತ್ ಧನಲಾಭವಾಗಲಿದೆ. ಅಪಾರ ಲಾಭವನ್ನು ಪಡೆಯಲಿದ್ದೀರಿ. ಸಾಲದಿಂದ ಮುಕ್ತಿ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ನೆಮ್ಮದಿ ಇರಲಿದೆ.
