ಮಣಿಪಾಲ : ತನಿಖೆಯ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಗುರುವಾರ ನಡೆದಿದೆ.
ಕೊಂಪೆಲ್ಲ ಲಕ್ಷ್ಮೀ ನಾರಾಯಣ ಎಂಬವರಿಗೆ Skype App ಮೂಲಕ Mumbai.cbi.gov.in ನಿಂದ ಸಂದೀಪ್ ಮತ್ತು ಆಕಾಶ್ ಕುಲ್ಹರಿ ಎಂಬವರು ವೀಡಿಯೋ ಕರೆ ಮಾಡಿ ಮಾತನಾಡಿದ್ದು, ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ ಎಂದಿದ್ದಾರೆ.
ಅಲ್ಲದೇ, ತನಿಖೆ ನೆಪದಲ್ಲಿ ಬೆದರಿಸಿ ಲಕ್ಷ್ಮೀ ನಾರಾಯಣ ಅವರ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು Skype App ಮೂಲಕ ಪಡೆದುಕೊಂಡು, ಅವರ ಗಮನಕ್ಕೆ ಬಾರದೇ ಬ್ಯಾಂಕ್ ಖಾತೆಯಿಂದ 19,78,700/- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ.
Advertisement. Scroll to continue reading.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In this article:cyber crime, Diksoochi news, fraud case, manipal, money laundering, Udupi
Click to comment

































