ತಿರುವನಂತಪುರಂ : ಶಬರಿಮಲೆ ಸಹಾಯಕ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಮಿಳುನಾಡಿನ ಕುಂಭಕೋಣಂನ ರಾಮ್ ಕುಮಾರ್ (43) ಮೃತಪಟ್ಟವರು.
ಗುರುವಾರ ಬೆಳಗ್ಗೆ ಕೊಠಡಿಯಲ್ಲಿ ಕುಸಿದು ಬಿದ್ದಿರುವುದು ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದರು ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಇಂದು 20 ನಿಮಿಷ ತಡವಾಗಿ ದೇವಸ್ಥಾನ ತೆರೆಯಲಾಯಿತು. ಶುದ್ಧೀಕರಣದ ನಂತರ ದೇವಾಲಯವನ್ನು ತೆರೆಯಲಾಯಿತು. ದೇವಸ್ಥಾನ ತೆರೆಯಲು ವಿಳಂಬವಾದ ಕಾರಣ ಯಾತ್ರಾರ್ಥಿಗಳು ಬಹಳ ಹೊತ್ತು ಕಾಯಬೇಕಾಯಿತು.
ಈ ನಡುವೆ ಸನ್ನಿಧಾನಂನಲ್ಲಿ ನೂಕುನುಗ್ಗಲು ಉಂಟಾಗಿದೆ. ಭಾರೀ ಜನದಟ್ಟಣೆಯನ್ನು ನಿಯಂತ್ರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ನಿನ್ನೆ ಸೂಚಿಸಿತ್ತು.
ಕಳೆದ ಕೆಲ ದಿನಗಳಿಂದ ದರ್ಶನಕ್ಕೆ 10 ಗಂಟೆಗೂ ಹೆಚ್ಚು ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನ್ಯಾಯಾಲಯದ ಈ ಕ್ರಮ ಸೂಚಿಸಿತ್ತು.
ಪುರಷರಷ್ಟೇ ಅಲ್ಲದೇ ಈ ಬಾರಿ ಶಬರಿಮಲೆಗೆ ಬರುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಶಬರಿಮಲೆಯಕ್ಕೆ ಬರುವ ಮಹಿಳೆಯರ ಸಂಖ್ಯೆ ಶೇಕಡ 20ರಷ್ಟು ಹೆಚ್ಚಾಗಿದೆ ಎಂದು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.



































