ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು.

ಆವರ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ದಿವ್ಯಾ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿ ಪಡೆದು ಈ ಗ್ರಾಮದಲ್ಲಿ ಒಂದು ಸ್ವಾವಲಂಬಿ ಮೇಣದಬತ್ತಿ ತಯಾರಿಕಾ ಘಟಕ ಮಾಡುವ ಭರವಸೆ ನೀಡಿ ಶಿಬಿರಾರ್ಥಿಗಳಿಗೆ ಗ್ರಾಮ ಪಂಚಾಯತ್ ಪರವಾಗಿ ಸ್ವ ಉದ್ಯೋಗ ಮಾಡುವವರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ರೀಯೇಶನ್ಸ್ ನ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಸ್ಮಾರ್ಟ್ ಕ್ರೀಯೇಶನ್ಸ್ ಸಂಸ್ಥೆಯ ಕಾರ್ಯಕ್ರಮದ ವಿಶೇಷತೆಯನ್ನು ಮತ್ತು ಸಂಸ್ಥೆಯ ಸ್ವ ಉದ್ಯೋಗಿಗಳಿಗೆ ಯಾವಾಗಲು ಸಹಾಯಕ್ಕೆ ಇರುವ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರುಡ್ ಸೆಟ್ ಬ್ರಹ್ಮಾವರದ ನಿರ್ದೆಶಕ ಡಾ. ಬೊಮ್ಮಯ್ಯ ಎಂ ಮಾತನಾಡಿ, ರುಡ್ ಸೆಟ್ ಸಂಸ್ಥೆಯ ತರಬೇತಿ ಮತ್ತು ಸಮಾಜಿಕ ಬದಲಾವಣೆಯಲ್ಲಿ ಸ್ವ ಉದ್ಯೋಗದ ಪಾತ್ರವನ್ನು ಶಿಬಿರಾರ್ಥಿಗಳಿಗೆ ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಮೀನಾ ಬಾನು, ಪಂಚಾಯತ್ ಸದಸ್ಯ ಸಂತೋಷ್ ಕೊಣ್ಣಿಮಕ್ಕಿ, ಸ.ಹಿ.ಪ್ರಾ ಶಾಲೆ ಹೈಕಾಡಿಯ ಮುಖ್ಯೋಪಾಧ್ಯಾಯ ರವಿರಾಜ್ ಶೆಟ್ಟಿ, ಎಸ್ ಡಿ.ಎಂಸಿ ಅಧ್ಯಕ್ಷ ರಾಘವೇಂದ್ರ ಮಡಿವಾಳ ಗೋರಾಜೆ, ಶಾಲಾ ಹ.ವಿ.ಸಂ ಅಧ್ಯಕ್ಷ ಆಸಿಫ್ ಹೈಕಾಡಿ, ಸೂರ್ಯ ಪ್ರಕಾಶ್ ದಾಮ್ಲೆ, ರುಡ್ ಸೆಟ್ ಸಂಸ್ಥೆ ಸಿಬ್ಬಂದಿ ರವಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕೃಷ್ಣಮೂರ್ತಿ ಹೈಕಾಡಿ ಸ್ವಾಗತಿಸಿದರು. ಟ್ರಸ್ಟ್ ನ ಸದಸ್ಯರಾದ ಅನಿತಾ ಶಂಕರ್ , ಕೌಸಲ್ಯ, ನಾಗರತ್ನ, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು ಆವರ್ಸೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರಿ ಸುಮಾರು 30ಕ್ಕೂ ಹೆಚ್ಚು ಗ್ರಾಮದ ಮಹಿಳೆಯರು ಈ ತರಬೇತಿಗೆ ಸೇರ್ಪಡೆಗೊಂಡಿದ್ದಾರೆ.


































