Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಕ್ಯಾಂಡಲ್ ತಯಾರಿಕಾ ತರಬೇತಿ ಸಮಾರೋಪ ಸಮಾರಂಭ

0

ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ಬ್ರಹ್ಮಾವರ (ರುಡ್ ಸೆಟಿ) ಮತ್ತು ಸ್ಮಾರ್ಟ್ ಕ್ರಿಯೇಶನ್ಸ್ ಎಜುಕೇಶನ್ ಟ್ರಸ್ಟ್  ಹೈಕಾಡಿ ಉಡುಪಿ ಜಿಲ್ಲೆ, ಸಹಭಾಗಿತ್ವದಲ್ಲಿ ಕ್ಯಾಂಡಲ್ ತಯಾರಿಕಾ ತರಬೇತಿ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಇತ್ತೀಚೆಗೆ ನಡೆಯಿತು.

ಬೆಳ್ವೆ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವೀಣಾ ಹರೀಶ್ ಶೆಣೈ ಮಾತನಾಡಿ, ಈ ತರಬೇತಿ ಇಲ್ಲಿಯೇ ಅಂತ್ಯವಲ್ಲ, ಇದು ಹೊಸ ಆರಂಭ. ಕಲಿತ ಕೌಶಲ್ಯವನ್ನು ಉದ್ಯಮವಾಗಿ ರೂಪಿಸಿ, ಸ್ವಾವಲಂಬನೆ ಸಾಧಿಸಿ, ಇನ್ನಿತರರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳೆಯಲಿ ಎಂದರು.

ಸ್ಮಾರ್ಟ್ ಕ್ರಿಯೇಷನ್ ಅಧ್ಯಕ್ಷರ ಶ್ರೀ ಕೃಷ್ಣಮೂರ್ತಿ ಹೈಕಾಡಿ ಮಾತನಾಡಿ, ಇಂದು ನಾವು ಸ್ವ ಉದ್ಯೋಗದ ದಾರಿಯಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟ ಸಂತಸದ ಕ್ಷಣದಲ್ಲಿದ್ದೇವೆ. ಕ್ಯಾಂಡಲ್ ಮೇಕಿಂಗ್ ತಯಾರಿಕಾ ತರಬೇತಿ ಯಶಸ್ವಿಯಾಗಿ ಮುಗಿದು, ಭಾಗವಹಿಸಿದ ಪ್ರತಿಯೊಬ್ಬರೂ ಹೊಸ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಕನಸನ್ನು ತಮ್ಮೊಳಗೆ ಬೆಳೆಸಿಕೊಂಡಿದ್ದಾರೆ. ಕಲಿಕೆ ಎಂಬುದು ಕೇವಲ ಜ್ಞಾನವಲ್ಲ, ಅದು ಬದುಕನ್ನು ರೂಪಿಸುವ ಶಕ್ತಿ ಎಂಬುದಕ್ಕೆ ಈ ತರಬೇತಿ ಉತ್ತಮ ಉದಾಹರಣೆ ಎಂದು ಶುಭ ಹಾರೈಸಿದರು.

ರುಡ್‌ ಸೆಟ್ ಬ್ರಹ್ಮವರ ಸಂಸ್ಥೆಯ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ,  ಚೈತ್ರ, ‌ ಶ್ರೇಯಾ,  ಲೀಲಾವತಿ, ಆವರ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಮೀನಾ, ಸ್ಮಾರ್ಟ್ ಕ್ರಿಯೇಶನ್ ಎಜುಕೇಶನ್ ಟ್ರಸ್ಟ್ ನ ಸದಸ್ಯೆ ನೇತ್ರಾವತಿ , ಕೌಸಲ್ಯ ಕೃಷ್ಣಮೂರ್ತಿ,  ಅನಿತಾ ಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement. Scroll to continue reading.

ಕಾರ್ಯಕ್ರಮವನ್ನು  ನೇತ್ರಾವತಿ ನಿರೂಪಿಸಿದರು. ಕೃಷ್ಣಮೂರ್ತಿ ಹಾಯ್ಕಾಡಿ ಸ್ವಾಗತಿಸಿ, ವಂದಿಸಿದರು. ಸುಮಾರು 27 ಜನರು ತರಬೇತಿಯನ್ನು ಪಡೆದುಕೊಂಡಿದ್ದು ರುಡ್‌ ಸೆಟ್‌ ಮತ್ತು ಸ್ಮಾರ್ಟ್‌ ಕ್ರಿಯೇಶನ್ಸ್‌ ಸಂಸ್ಥೆಯಿಂದ ಪ್ರಮಾಣಪತ್ರ ಸ್ವೀಕರಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!