ಉಡುಪಿ : ಲೇಖಕಿ, ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ತಿಲಕಾ ನಾಗರಾಜ್ ಅವರ ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಕಥಾ ಸಂಕಲನ ಟೆಲಿವಿಶನ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಅಕ್ಷರ ನಾದ ಪಬ್ಲಿಕೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೆ. ಆರ್. ಸೇವಾ ಚಾರಿಟಬಲ್ ಎಮ್. ಎಸ್. ಸಿ. ಐ. ಟಿ. ಆನೆಕಲ್ ಇದರ ಅಧ್ಯಕ್ಷ, ಸಂಸ್ಥಾಪಕ ಡಾ. ಸಿ. ಎಮ್. ರಾಜಶೇಖರ್ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಭಾಪಾಲಕ ರೆ. ಎಸ್. ಆರ್. ಷಣ್ಮುಗ ಪೀಟರ್ , ಅಕ್ಷರ ನಾದ ಮೈಸೂರು ಜಿಲ್ಲಾಧ್ಯಕ್ಷ ಡಾ. ಟಿ. ತ್ಯಾಗರಾಜು, ಸಾಹಿತಿ ಪುಷ್ಪಾ ನಾಗತಿಹಳ್ಳಿ,
ಸಮಾಜ ಸೇವಕ ಅನಿಲ್ ಮೆಂಡೋನ್ಸ ಮೂಡುಬಿದಿರೆ, ಡಾ. ವಿಷ್ಣು ಸೇನಾ ಸಮಿತಿ, ಮಹಿಳಾ ಘಟಕ, ಬೆಂಗಳೂರು ಮಹಿಳಾ ಅಧ್ಯಕ್ಷೆ ಡಾ. ವಿಷ್ಣು ವಿಜಯಲಕ್ಷ್ಮಿ, ಲೇಖಕ ವಾ. ಮ. ಗಂಗಾಧರ್ ಅತ್ರೇಯ ಉಪಸ್ಥಿತರಿದ್ದರು.
ಅಕ್ಷರ ನಾದ ಕಲಾ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ಸಂಸ್ಥಾಪಕಿ, ರಾಜ್ಯಾಧ್ಯಕ್ಷೆ ಡಾ. ಶ್ರುತಿ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.


































