ಉಡುಪಿ : ರಾಜ್ಯ ಸರ್ಕಾರ ಈಗಾಲೇ ಎರಡು ಹಂತದ ಪ್ಯಾಕೇಜ್ ಘೋಷಣೆ ಮಾಡಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಒಂದಷ್ಟು ಮಂದಿಗೆ ನೆರವಾಗಿದ್ದಾರೆ. ಆದರೆ ಈ ಎರಡೂ ಪ್ಯಾಕೇಜ್ ನಲ್ಲೂ ಕರಾವಳಿಯ ದೈವ ಚಾಕ್ರಿ ಮಾಡುವ ವರ್ಗವನ್ನು ಕಡೆಗಣಿಸಲಾಗಿದೆ.

ಕಳೆದ ವರ್ಷ ಹಾಗೂ ಈ ವರ್ಷವೂ ದೈವಾರಾಧನೆ ನಡೆಯುವ ಸಮಯದಲ್ಲಿಯೇ ಲಾಕ್ ಡೌನ್ ಘೋಷಣೆಯಾಗಿದೆ. ಇದರಿಂದ ದೈವಾರಾಧನೆಯನ್ನೇ ನೆಚ್ಚಿಕೊಂಡಿರುವ ಬಡ ಕುಟುಂಬಗಳು ಸಂಕಷ್ಟ ಸ್ಥಿತಿಯಲ್ಲಿವೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು. ದೈವಚಾಕರಿ ಮಾಡುವವರಿಗೂ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ. ಈ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದೆ.
Advertisement. Scroll to continue reading.

In this article:diksoochgi tv, Diksoochi news, diksoochi udupi, ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ, ಟ್ವಿಟ್ಟರ್ ಅಭಿಯಾನ
Click to comment

































